ಬೆಂಗಳೂರು: ವಿಧಾನಪರಿಷತ್ ಕಲಾಪದ ವೇಳೆ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಪದಬಳಕೆಗೆ ಗದ್ದಲ-ಕೋಲಾಹಲ ನಡೆದಿದೆ.
ಪರಿಷತ್ ಸದಸ್ಯ ಎನ್.ರವಿಕುಮಾರ್ ಅವರಿಗೆ ‘ಮಾಮೂಲಿ ಗಿರಾಕಿ’ ಎಂಬ ಪದ ಬಳಕೆ ಮಾಡಿದ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ವಿರುದ್ಧ ಬಿಜೆಪಿ ಸದಸ್ಯರು ಕೆಂಡಾಮಡಲರಾಗಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎನ್.ರವಿಕುಮಾರ್ ಅವರಿಗೆ ಹರಿಪ್ರಸಾದ್ ಮಾಮೂಲಿ ಗಿರಾಕಿ ಪದ ಬಳಕೆ ಮಾಡುತ್ತಿದ್ದಂತೆ ವೈ.ಎ.ನಾರಾಯಣಸ್ವಾಮಿ ಗರಂ ಆಗಿದ್ದು, ನೋಡಿ ಕೊಳ್ಳುತ್ತೇವೆ ಎಂದು ಆವಾಜ್ ಹಾಕಿದ್ದಾರೆ. ಇದಕ್ಕೆ ಏನೋ ನೀನು ನೋಡಿಕೊಳ್ಳುವುದು? ಎಂದು ಹರಿಪ್ರಸಾದ್ ಕಿಡಿಕಾರಿದ್ದಾರೆ. ಈ ವೇಳೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗದ್ದಲ ಕೋಲಾಹಲ ಆರಂಭವಾಗಿದ್ದು, ಪರಿಷತ್ ಕಲಾಪವನ್ನು ಮಧ್ಯಾಹ್ನ 3ಗಂಟೆಯವರೆಗೂ ಮುಂದೂಡಿ ಸಭಾಪತಿ ಮಲ್ಕಾಪುರೆ ಆದೇಶ ಹೊರಡಿಸಿದ್ದಾರೆ.