ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸುಳಿವಿನ ಬೆನ್ನಲ್ಲೇ ಶಾಸಕ ರಮೇಶ್ ಜಾರಕಿಹೊಳಿ ಮಂತ್ರಿ ಸ್ಥಾನಕ್ಕಾಗಿ ತೀವ್ರ ಕಸರತ್ತು ನಡೆಸಿದ್ದು, ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರಿನ ಆರ್.ಟಿ.ನಗರ ನಿವಾಸದಲ್ಲಿ ಸಿಎಂ ಬೊಮ್ಮಾಯಿ ಭೇಟಿಯಾದ ರಮೇಶ್ ಜಾರಕಿಹೊಳಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಈ ವೇಳೆ ಬಿ.ಎಸ್.ಯಡಿಯೂರಪ್ಪ ಅವರ ಮಾಜಿ ರಾಜಕೀಯ ಕಾರ್ಯದರ್ಶಿ ಸಂತೋಷ್ ಕೂಡ ಉಪಸ್ಥಿತರಿದ್ದರು.
ಆರ್ಡರ್ ಮಾಡಿದ 10 ನಿಮಿಷದಲ್ಲಿ ನಿಮ್ಮ ಕೈಲಿರುತ್ತಂತೆ ಸ್ಮಾರ್ಟ್ ಫೋನ್…!
ಸಿಎಂ ಭೇಟಿ ಬಳಿಕ ಸುದ್ದಿಗಾರೊಂದಿಗೆ ಮಾತನಾಡುತ್ತಾ, ನಾನು ನಿಮ್ಮ ಮುಂದೆ ಏನೂ ಮಾತನಾಡಲ್ಲ, ನಾನು ಏನು ಮಾತನಾಡಿದರೂ ಉಲ್ಟಾ ಹಾಕ್ತೀರಾ. ಮಾಧ್ಯಮದವರು ಕರೆಕ್ಟ್ ಇದ್ದಿದ್ರೆ ನಮ್ ಬಾಳ್ ಹಿಂಗ್ಯಾಕ್ ಆಗ್ತಿತ್ತು? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಪುಟಕ್ಕೆ ರಮೇಶ ಜಾರಕಿಹೊಳಿ ಸೇರ್ಪಡೆ: ಸಿಎಂ ಭೇಟಿಯಾಗಿ ಚರ್ಚೆ
ಏನು ಹೇಳಿದರೂ ಮಾಧ್ಯಮಗಳಲ್ಲಿ ಉಲ್ಟಾ ಸುದ್ದಿ ಪ್ರಸಾರ ಮಾಡಲಾಗುತ್ತೆ. ಹಾಗಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿ ತೆರಳಿದರು. ಸಿಎಂ ಬೊಮ್ಮಾಯಿ ಮತ್ತೆ ದೆಹಲಿಗೆ ತೆರಳುತ್ತಿರುವ ಬೆನ್ನಲ್ಲೇ ಶಾಸಕ ರಮೇಶ್ ಜಾರಕಿಹೊಳಿ ಸಿಎಂ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.