ಉಡುಪಿ: ಮಾದಕವಸ್ತು ಸೇವಿಸುತ್ತಿದ್ದ 42 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ ಉಡುಪಿ ಜಿಲ್ಲೆಯ ಮಣಿಪಾಲ ವಿಶ್ವವಿದ್ಯಾಲಯ ಆದೇಶ ಹೊರಡಿಸಿದೆ.
ಅಮಾನತಾದ ವಿದ್ಯಾರ್ಥಿಗಳು ತರಗತಿಗಳಿಗೆ 1 ತಿಂಗಳ ಕಾಲ ತರಗತಿಗಳಿಗೆ ಹಾಜರಾಗುವಂತಿಲ್ಲ, ವಿಶ್ವ ವಿದ್ಯಾಲಯದ ಯಾವುದೇ ಸೌಲಭ್ಯ ಬಳಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಡ್ರಗ್ಸ್ ಸೇವಿಸಿದವರನ್ನು ಕ್ರಿಮಿನಲ್ ಗಳು ಎಂದು ಪರಿಗಣಿಸಲು ಸಾಧ್ಯವಿಲ್ಲ, ಆದರೆ ಪೆಡ್ಲರ್ ಗಳನ್ನು ಮಾತ್ರ ಕ್ರಿಮಿನಲ್ ಗಳೆಂದು ಪರಿಗಣಿಸಲಾಗುವುದು. ಎಡಿಜಿಪಿ ಅಲೋಕ್ ಕುಮಾರ್ ಅವರ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಮಣಿಪಾಲ್ ವಿವಿ ಪ್ರಕಟಣೆ ಹೊರಡಿಸಿದೆ.