ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೊಮ್ಮಗಳು ಡಾ.ಸೌಂದರ್ಯ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಯಡಿಯೂರಪ್ಪನವರ ನಿವಾಸಕ್ಕೆ ದೌಡಾಯಿಸಿದ್ದಾರೆ.
ವಸಂತನಗರದಲ್ಲಿರುವ ಅಪಾರ್ಟ್ ಮೆಂಟ್ ನಿವಾಸದಲ್ಲಿ ಡಾ.ಸೌಂದರ್ಯ ಆತ್ಮಹತ್ಯೆಗೆ ಶರಣಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸಿಎಂ ಬಸವರಾಜ್ ಬೊಮ್ಮಾಯಿ, ಯಡಿಯೂರಪ್ಪನವರ ಕಾವೇರಿ ನಿವಾಸಕ್ಕೆ ಧಾವಿಸಿದ್ದಾರೆ.
ಸಿಎಂ ಜತೆಗೆ ಗೃಹ ಸಚಿವ ಅರಗ ಜ್ಞಾನೇಂದ್ರ, ಸಚಿವ ಮುರುಗೇಶ್ ನಿರಾಣಿ, ಗೋವಿಂದ ಕಾರಜೋಳ ಕೂಡ ಯಡಿಯೂರಪ್ಪ ನಿವಾಸಕ್ಕೆ ದೌಡಾಯಿಸಿದ್ದಾರೆ.
ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಸೌಂದರ್ಯ, ಅಪಾರ್ಟ್ ಮೆಂಟ್ ನಿವಾಸದಲ್ಲಿ 9 ತಿಂಗಳ ಮಗುವನ್ನು ಪಕ್ಕದ ರೂಮಿನಲ್ಲಿ ಬಿಟ್ಟು ತನ್ನ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
2018ರಲ್ಲಿ ಡಾ.ನೀರಜ್ ಅವರನ್ನು ವಿವಾಹವಾಗಿದ್ದ ಡಾ.ಸೌಂದರ್ಯ ದಂಪತಿಗೆ 9 ತಿಂಗಳ ಮಗುವಿದ್ದು, ಮೂರು ತಿಂಗಳ ಹಿಂದಷ್ಟೇ ಬಾಣಂತನ ಮುಗಿಸಿ ಬೆಂಗಳೂರಿನ ಪತಿ ನಿವಾಸಕ್ಕೆ ವಾಪಸ್ ಆಗಿದ್ದರು ಎಂದು ತಿಳಿದಿಬಂದಿದೆ. ವೃತ್ತಿಯಲ್ಲಿ ವೈದ್ಯೆಯಾಗಿದ್ದ ಸೌಂದರ್ಯ ಆತ್ಮಹತ್ಯೆಗೆ ಕಾರಣವೇನು? ಮಾಜಿ ಸಿಎಂ ಮೊಮ್ಮಗಳ ಬದುಕಿನಲ್ಲಿ ಅಂಥದ್ದೇನಾಗಿತ್ತು? ಎಂಬುದೇ ಈಗಿರುವ ಪ್ರಶ್ನೆ.