ಮಂಡ್ಯ: ಪಿಎಸ್ಐ ಅಕ್ರಮ ನೇಮಕಾತಿ ಸಂಬಂಧ ಮಾಜಿ ಸಚಿವ ಚೆಲುವರಾಯಸ್ವಾಮಿ ಆಪ್ತ ಶರತ್ ರಾಮಣ್ಣ ಅವರನ್ನು ನಾಗಮಂಗಲದಲ್ಲಿ ಬುಧವಾರ ಬಂಧಿಸಲಾಗಿದೆ.
ಮಂಡ್ಯದಲ್ಲಿ ಶರತ್ ರಾಮಣ್ಣ ಅವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಈತ ಶ್ರವಣಬೆಳಗೊಳದ ಪಿಎಸ್ಐ ಅಭ್ಯರ್ಥಿ ಪರವಾಗಿ ಅಕ್ರಮದಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಶರತ್ ಬಂಧನದಿಂದ ಕಾಂಗ್ರೆಸ್ ಪಕ್ಷ ಇದೀಗ ಮುಜುಗರಕ್ಕೀಡಾಗಿದೆ.
ಶರತ್ ತಾಲೂಕು ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂದು ಕೂಡ ತಿಳಿದು ಬಂದಿದೆ. ಪಿಎಸ್ಐ ಕೆಲಸದ ವಿಚಾರದಲ್ಲಿ ಮಧ್ಯವರ್ತಿಯಾಗಿದ್ದ ಈತ ಪರೀಕ್ಷೆ ಮುಗಿದ ನಂತರ ನೇಮಕಾತಿ ವಿಭಾಗ ಸ್ಟ್ರಾಂಗ್ ರೂಮ್‌ನಲ್ಲಿದ್ದ ಕೆಲ ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳನ್ನು ತಿದ್ದಿದ್ದಾರೆ. ಇದಕ್ಕೆ ಅಭ್ಯರ್ಥಿಯಿಂದ ತಲಾ 30 ರಿಂದ 40 ಲಕ್ಷ ರೂ. ವಸೂಲಿ ಮಾಡಿದ್ದಾರೆ ಎಂದು ಹೇಳಲಾಗಿದೆ.