ಹಾಸನ: ರಾಜಕಾರಣಿಗಳ ಮಾತಿಗೆ ಹಿಡಿತವಿರುವುದಿಲ್ಲ ಎಂಬುದು ಈಗಾಗಲೇ ಹಲವು ಬಾರಿ ಸಾಬೀತಾಗಿದೆ. ಆದರೆ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡರೊಬ್ಬರು ಮಾತಿನ ಭರದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಾವನ್ನೇ ಪರೋಕ್ಷವಾಗಿ ಬಯಸಿದ ಘಟನೆ ನಡೆದಿದೆ.
ಸಮಾರಂಭವೊಂದರಲ್ಲಿ ಮಾತನಾಡಿದ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಹೆಚ್.ಡಿ.ದೇವೇಗೌಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾ, ಈಗಾಗಲೇ ದೇವೇಗೌಡರು ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗ್ತಾರೆ. ನಾಲ್ವರ ಮೇಲೆ ಹೋಗುವ ಕಾಲ ಹತ್ತಿರದಲ್ಲಿಯೇ ಇದೆ ಎಂದು ವ್ಯಂಗ್ಯವಾಡಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿ ದೇವೇಗೌಡರ ಸಾವನ್ನೇ ಬಯಸಿದ್ದಾರೆ ಕೆ.ಎನ್.ರಾಜಣ್ಣ.
ರಾಜಕಾರಣದಲ್ಲಿ ಪರಸ್ಪರ ವಾಗ್ದಾಳಿ, ಆಕ್ರೋಶ ಒಂದು ಮಟ್ಟಕ್ಕೆ ಓಕೆ ಆದರೆ ಸಾವಿನ ರಾಜಕಾರಣ ಮಾಡುವಷ್ಟರ ಮಟ್ಟಕ್ಕೆ ವಿವೇಚನೆ ಕಳೆದುಕೊಳ್ಳುವುದು ಯಾಕೆ? ಕೆ.ಎನ್.ರಾಜಣ್ಣ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ, ಸಿ.ಎಂ.ಇಬ್ರಾಹಿಂ ಸೇರಿದಂತೆ ಹಲವರು ಖಂಡಿಸಿದ್ದಾರೆ. ಅಲ್ಲದೇ ಸಾರ್ವಜನಿಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.