ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೆ ಐಟಿ ಅಧಿಕಾರಿಗಳು ನೋಟೀಸ್ ನೀಡಿ, ಆಸ್ತಿ ವಿವರ ಕೇಳಿದ್ದಾರೆ ಎಂದು ಶಾಸಕ ಹೆಚ್.ಡಿ. ರೇವಣ್ಣ ಕಿಡಿಕಾರಿದ್ದಾರೆ.
ಹಾಸನದಲ್ಲಿ ಮಾತನಾಡಿದ ರೇವಣ್ಣ, ಐಟಿ ಅಧಿಕಾರಿಗಳ ನೋಟಿಸ್ ಗೆ ನಾವು ಉತ್ತರ ಕೊಡುತ್ತೇವೆ. ನಮ್ಮಮ್ಮ, ನಮ್ಮಪ್ಪ ಕೋಟ್ಯಂತರ ರೂಪಾಯಿ ಆಸ್ತಿ ಮಾಡಿದ್ದಾರಾ ? ನಾನು ಆಲೂಗಡ್ಡೆ ಬೆಳೆದಿದ್ದೆ, ಈಗ ಕಬ್ಬು ಬೆಳೆದಿದ್ದೇನೆ. ನನಗೂ ನೋಟಿಸ್ ನೀಡಲಿ. ಕಬ್ಬು ಬೆಳೆ ನೋಡಲು ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದು ಗರಂ ಆದರು.
ಆರ್ ಟಿ ಒ ಅಧಿಕಾರಿಗಳು ಒಬ್ಬೊಬ್ಬರು ಇನ್ನೂರು ಕೋಟಿ ಮಾಡಿದ್ದಾರೆ. ಅವರಿಗೆ ನೋಟಿಸ್ ಕೊಡುವುದು ಬಿಟ್ಟು ದೇವೇಗೌಡರ ಪತ್ನಿಗೆ ನೋಟಿಸ್ ನೀಡಿದ್ದಾರೆ. ದ್ವೇಷದ ರಾಜಕಾರಣ ಯಾವ ಮಟ್ಟಕ್ಕೆ ಹೋಗಿದೆ. ಜೆಡಿಎಸ್ ನವರು ಯಾರು ಎಂದು ಆರಿಸಿ ನೋಟಿಸ್ ಕೊಡುತ್ತಿದ್ದಾರೆ. ನಮಗೂ ಒಂದು ಕಾಲ ಬರುತ್ತೆ ಆಗ ಎಲ್ಲದಕ್ಕೂ ಉತ್ತರ ಕೊಡುತ್ತೇವೆ ಎಂದು ವಾಗ್ದಾಳಿ ನಡೆಸಿದರು.