ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆಗಾಗಿ ಕುಟುಂಬದವರೇ ಸಂಚು ರೂಪಿಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ. ರೇಖಾ ಪತಿಯ ಸಹೋದರಿಯೇ ಹತ್ಯೆಯ ಹಿಂದಿನ ರೂವಾರಿ ಎನ್ನಲಾಗಿದೆ.
ರೇಖಾ ಕದಿರೇಶ್ ಹತ್ಯೆಗಾಗಿ ಕದಿರೇಶ್ ಸಹೋದರಿ ಮಾಲಾ ಹಾಗೂ ಅರುಳ್ 25 ಲಕ್ಷ ಡೀಲ್ ಕುದುರಿಸಿದ್ದರು. ರೇಖಾರನ್ನು ಹತ್ಯೆಗೈದು ತಮಿಳುನಾಡಿಗೆ ಎಸ್ಕೇಪ್ ಆಗಲು ಸಂಚು ರೂಪಿಸಿದ್ದರು. ಅಂತಿಮವಾಗಿ 10 ಲಕ್ಷ ರೂ. ಹಣ ಹೊಂದಿಸಿ ಸ್ಟೀಫನ್ ಎಂಬಾತನಿಂದ ಪಕ್ಕಾ ಪ್ಲಾನ್ ರೂಪಿಸಿದ್ದರು.
ಕೊರೊನಾ 3 ನೇ ಅಲೆ ಆತಂಕದಲ್ಲಿದ್ದವರಿಗೆ ʼನೆಮ್ಮದಿʼ ಸುದ್ದಿ
ಸ್ಟೀಫನ್ ಎಂಬಾತ ಪೀಟರ್ ಹಾಗೂ ಸೂರ್ಯ ಎಂಬುವವರಿಂದ ಹತ್ಯೆ ಮಾಡಿಸಿ ಕೃತ್ಯದ ವೇಳೆ ಯಾರೂ ಅಡ್ಡಿಯಾಗದಂತೆ ನೋಡಿಕೊಳ್ಳುವಂತೆಯೂ ಸೂಚಿಸಿದ್ದ ಎನ್ನಲಾಗಿದೆ. ಒಟ್ಟಾರೆ ಹಾಡಹಗಲೇ ರೇಖಾ ಕದಿರೇಶ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿಗಳು ತಮಿಳುನಾಡಿಗೆ ಪರಾರಿಯಾಗಲು ಮುಂದಾಗಿದ್ದರು.
ಆದರೆ ತಮಿಳುನಾಡಿನಲ್ಲಿ ಲಾಕ್ ಡೌನ್ ಇರುವುದರಿಂದ ಎಸ್ಕೇಪ್ ಸಂಚು ವಿಫಲವಾಗಿತ್ತು ಎನ್ನಲಾಗಿದೆ. ರೇಖಾ ಅಂತ್ಯಕ್ರಿಯೆ ಬಳಿಕ ಮಾಲಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿಷಯ ಬಹಿರಂಗವಾಗಿದೆ ಎಂದು ತಿಳಿದುಬಂದಿದೆ.