ಮಂಡ್ಯ: ಮಾಂಸಾಹಾರ ಸೇವಿಸಿ ನಾಗಬನ ಹಾಗೂ ಹನುಮಂತ ದೆವಸ್ಥಾನಕ್ಕೆ ಹೋದ ವಿಚಾರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ದೇವಸ್ಥಾನದ ಒಳಗೆ ಹೋಗಿಲ್ಲ, ಹೊರಗಿನಿಂದಲೇ ಕೈ ಮುಗಿದು ಬಂದಿದ್ದಾಗಿ ಹೇಳಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ. ರವಿ, ಮಾಂಸಾಹಾರ ಸೇವಿಸಿದ್ದು ನಿಜ. ಆದರೆ ದೇವಸ್ಥಾನದ ಒಳಗೆ ಹೋಗಿಲ್ಲ, ದೇವಸ್ಥಾನದ ಬಾಗಿಲು ಹಾಕಿದ್ದರಿಂದ ಹೊರಗಡೆಯಿಂದಲೇ ಕೈ ಮುಗಿದು ಬಂದಿದ್ದಾಗಿ ತಿಳಿಸಿದ್ದಾರೆ.
ರೋಡಲ್ಲಿಯೇ ನಿಂತು, ಹೊರಾವರಣದಲ್ಲಿ ಸುತ್ತಿಕೊಂಡು ಬಂದಿದ್ದೇವೆ ಹೊರತು ದೇವಸ್ಥಾನದ ಒಳಗೆ ಹೋಗಿಲ್ಲ. ನನಗೆ ದೇವರ ಬಗ್ಗೆ ಶ್ರದ್ಧೆ, ಭಕ್ತಿ ಇದೆ, ನಾಗಬನಕ್ಕೆ ಮಾಂಸ ತಿಂದು ಹೋಗುವ ಹಾಗಿಲ್ಲ ಎಂಬುದು ಗೊತ್ತಿದೆ. ನಾನು ಹೋಗಿಯೂ ಇಲ್ಲ. ರೋಡಲ್ಲೆ ನಿಂತು ರೊಡಲ್ಲೇ ಕೈ ಮುಗಿದು ಬಂದಿದ್ದೇನೆ. ನಾನು ಧಾರ್ಮಿಕ ಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವವನು. ವರ್ಷದಲ್ಲಿ ದತ್ತಮಾಲೆ ಹಾಕುತ್ತೇನೆ, ನವರಾತ್ರಿಯಲ್ಲಿ ವ್ರತದಲ್ಲಿ ಇರುತ್ತೇನೆ. ಧಾರ್ಮಿಕ ನಂಬಿಕೆ ಉಳ್ಳವನು ನಾನು ಹೊರತು ನಾಸ್ತಿಕನಲ್ಲ ಎಂದು ಹೇಳಿದ್ದಾರೆ.