ಹೈದರಾಬಾದ್: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.
ಇಬ್ರಾಹಿಂ ಬೇಗ್ ಹಾಗೂ ಮಿರ್ಜಾ ಓಮರ್ ಬೇಗ್ ಬಂಧಿತ ಆರೋಪಿಗಳು. ಅಕ್ಟೋಬರ್ 30ರಂದು ರಾತ್ರಿ ಮಹಿಳೆ ಮೇಲೆ ಕಿರಾತಕರು ಗ್ಯಾಂಗ್ ರೇಪ್ ನಡೆಸಿದ್ದರು.
ಚತ್ರಿನಾಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.