ರಾಯಘಡ: ಮಹಾರಾಷ್ಟ್ರದಲ್ಲಿ ಮತ್ತೆ ಉಗ್ರರ ಆತಂಕ ಎದುರಾಗಿದೆ. ರಾಯಘಡ ಜಿಲ್ಲೆಯ ಹರಿಹರೇಶ್ವರ ಕಡಲ ಕಿನಾರೆಯಲ್ಲಿ ಅನುಮಾನಾಸ್ಪದ ಎರಡು ಬೋಟ್ ಗಳು ಪತ್ತೆಯಾಗಿವೆ.
ಇಂಗ್ಲೆಂಡ್ ನೋಂದಣಿಯಿರುವ ಎರಡು ಬೋಟ್ ಗಳಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ಇದು ಭಯೋತ್ಪಾದಕರ ಬೋಟ್ ಗಳು ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಎರಡು ಬೋಟ್ ಗಳು ರಾಯಘಡ ಕಡಲಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಪತ್ತೆಯಾಗಿದ್ದು, ಬೋಟ್ ಗಳಲ್ಲಿ ಎಕೆ 47, ಬುಲೆಟ್ಸ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಇವೆ. ಈ ಬಗ್ಗೆ ರಾಯಘಡ ಎಸ್ ಪಿ ಧುಧೆ ಮಾಹಿತಿ ನೀಡಿದ್ದು, ಶಂಕಿತ ಬೋಟ್ ಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಜಿಲ್ಲೆಯಾದ್ಯಂತ ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.