
ಘಟನೆಯಲ್ಲಿ ಯಾವುದೇ ಪ್ರಯಾಣಿಕರ ಪ್ರಾಣಹಾನಿಯಾಗಿಲ್ಲ. ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣಾ ತಂಡಗಳಿಗೆ ಎಚ್ಚರಿಕೆ ನೀಡಲಾಗಿದ್ದು, ತಕ್ಷಣವೇ ಅಗ್ನಿಶಾಮಕ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಪಶ್ಚಿಮ ರೈಲ್ವೇ ಮುಖ್ಯ ವಕ್ತಾರ ಸುಮಿತ್ ಠಾಕೂರ್ ತಿಳಿಸಿದ್ದಾರೆ.
ರೈಲಿಗೆ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆಯೆ ವೆಸ್ಟರ್ನ್ ರೈಲ್ವೇಯ ಅಧಿಕಾರಿಗಳು, ಸ್ಥಳೀಯ ಅಗ್ನಿಶಾಮಕ ದಳ ಮತ್ತು ರೈಲಿನ ಸಿಬ್ಬಂದಿ ತಕ್ಷಣ ಬೆಂಕಿಯನ್ನು ನಂದಿಸಲು ಮುಂದಾದರು. ಜೊತೆಗೆ ಬೆಂಕಿ ಜ್ವಾಲೆ ಪಕ್ಕದ ಕೋಚ್‌ಗಳಿಗೆ ಹರಡುವುದನ್ನು ತಡೆಯಲು ಬೆಂಕಿಯಲ್ಲಿ ಹತ್ತಿ ಉರಿಯುತ್ತಿದ್ದ ಪ್ಯಾಂಟ್ರಿ ಕಾರನ್ನು ತಕ್ಷಣ ಬೇರ್ಪಡಿಸಿದರು ಎಂದು ಸುಮಿತ್ ಠಾಕೂರ್ ತಿಳಿಸಿದ್ದಾರೆ.
ಬೆಂಕಿ ಹತ್ತಿಕೊಂಡು ಉರಿಯುತ್ತಿರುವ ಪ್ಯಾಂಟ್ರಿ ಕಾರಿನಿಂದ, ಹವಾನಿಯಂತ್ರಿತ ಬೋಗಿಗಳಿಗೆ ಹೊಗೆ ಪ್ರವೇಶಿಸಿದ್ದರಿಂದ ಪ್ರಯಾಣಿಕರಲ್ಲಿ ಭೀತಿ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೆ ಇನ್ನುಳಿದ ಯಾವುದೇ ಬೋಗಿಗಳಿಗೆ ಬೆಂಕಿ ಪ್ರವೇಶಿಸಿದೆಯ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಮಹಾರಾಷ್ಟ್ರದ ವಾಯುವ್ಯ ಮೂಲೆಯಲ್ಲಿರುವ ನಂದೂರ್ಬಾರ್ ಜಿಲ್ಲೆ ಮುಂಬೈನಿಂದ ಸುಮಾರು 450 ಕಿಮೀ ದೂರದಲ್ಲಿದೆ.