ಮುಂಬೈ: ದೇಶದಲ್ಲಿ ರೂಪಾಂತರಿ ವೈರಸ್ ಅಟ್ಟಹಾಸ ಹೆಚ್ಚುತ್ತಿದ್ದು, ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸ್ಫೋಟಗೊಂಡಿದೆ. ಒಂದೇ ದಿನದಲ್ಲಿ 26 ಜನರಲ್ಲಿ ರೂಪಾಂತರಿ ವೈರಸ್ ಪತ್ತೆಯಾಗಿದ್ದು ಆತಂಕಕ್ಕೆ ಕಾರಣವಾಗಿದೆ.
26 ಜನರು ವಿದೇಶದಿಂದ ಬಂದವರಾಗಿದ್ದು, ಅವರಲ್ಲಿ ಇಬ್ಬರು ಹೈ ರಿಸ್ಕ್ ದೇಶಗಳಿಂದ ಬಂದವರಾಗಿದ್ದಾರೆ. 14 ಪುರುಷರು, 12 ಮಹಿಳೆಯರು ಹಾಗೂ ನಾಲ್ವರು 18 ವರ್ಷದೊಳಗಿನವರಾಗಿದ್ದಾರೆ. ಇಬ್ಬರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ.
BIG BREAKIG: 24 ಗಂಟೆಯಲ್ಲಿ ಮತ್ತೆ 6,358 ಜನರಲ್ಲಿ ಹೊಸದಾಗಿ ಸೋಂಕು ಪತ್ತೆ; 6,450 ಜನರು ಡಿಸ್ಚಾರ್ಜ್
ಇನ್ನು ಮಹಾರಾಷ್ಟ್ರದಲ್ಲಿ ಈವರೆಗೆ 167 ಜನರಲ್ಲಿ ರೂಪಾಂತರಿ ವೈರಸ್ ಒಮಿಕ್ರಾನ್ ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಒಮಿಕ್ರಾನ್ ಸೋಂಕಿತರ ಸಂಖ್ಯೆ 653ಕ್ಕೆ ಏರಿಕೆಯಾಗಿದೆ.