ಬೆಂಗಳೂರು: ರಾಜ್ಯದಲ್ಲಿ ಮಹಾಮಳೆಗೆ ಮತ್ತೊಂದು ಬಲಿಯಾಗಿದ್ದು, ತುಂಗಭದ್ರಾ ನದಿಯಲ್ಲಿ ಅರ್ಚಕರೊಬ್ಬರು ಕೊಚ್ಚಿ ಹೋಗಿರುವ ಘಟನೆ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದಲ್ಲಿ ನಡೆದಿದೆ.
ತುಂಗಭದ್ರಾ ನದಿ ದಡದಲ್ಲಿರುವ ಕರಿವೀರೇಶ್ವರ ದೇವಸ್ಥಾನದ ಅರ್ಚಕ ಲಿಂಗಪ್ಪ ಪೂಜಾರ (52) ನದಿ ನೀರಿನಲ್ಲಿ ಕೊಚ್ಚಿಹೋದವರು. ದೇವಸ್ಥಾನದ ಪೂಜೆಗೆಂದು ಬಂದ ಅರ್ಚಕರು ಸ್ನಾನಕ್ಕಾಗಿ ತುಂಗಭದ್ರಾ ನದಿಗೆ ಇಳಿದಿದ್ದಾರೆ. ನೀರಿನ ರಭಸಕ್ಕೆ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಅಗ್ನಿಶಾಮಕ ದಳ, ಸಿಂಧನೂರು ಗ್ರಾಮಾಂತರ ಪೊಲೀಸರು ಅರ್ಚಿಕರಿಗಾಗಿ ನದಿಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.