ಬೆಂಗಳೂರು: ಕೋವಿಡ್ 3ನೇ ಅಲೆ ಭೀತಿ ನಡುವೆಯೇ ಇಂದಿನಿಂದ 9-12ನೇ ತರಗತಿವರೆಗೆ ಶಾಲಾ-ಕಾಲೇಜುಗಳು ಆರಂಭಗೊಂಡಿದ್ದು, ಸ್ವತಃ ಸಿಎಂ ಬಸವರಾಜ್ ಬೊಮ್ಮಾಯಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂ ನ 18ನೇ ಕ್ರಾಸ್ ನಲ್ಲಿರುವ ಕಾಲೇಜಿಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ ಕಾಲೇಜು ಆವರಣದಲ್ಲಿ ಸಂಪಿಗೆ ಗಿಡನೆಟ್ಟು ನೀರೆರೆದರು. ಈ ವೇಳೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಮೊದಲಾದವರು ಸಿಎಂಗೆ ಸಾಥ್ ನೀಡಿದರು.
ಕಾಬೂಲ್‌ನಿಂದ ಸ್ವದೇಶಕ್ಕೆ ಬಂದಿಳಿಯುತ್ತಲೇ ’ಭಾರತ್ ಮಾತಾ ಕೀ’ ಘೋಷ ಮೊಳಗಿಸಿದ ಭಾರತೀಯರು
ಕೊರೊನಾ ಮುಂಜಾಗೃತಾ ಕ್ರಮವಾಗಿ ಕಾಲೇಜಿನಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳನ್ನು, ಥರ್ಮಲ್ ಸ್ಕ್ರೀನಿಂಗ್, ಕೊಠಡಿಗಳಲ್ಲಿ ವಿದ್ಯಾರ್ಥಿಗಳ ಅಂತರ ಸೇರಿದಂತೆ ಖುದ್ದು ಪರಿಶೀಲನೆ ನಡೆಸಿದರು.