alex Certify BIG NEWS: ಮನುಷ್ಯರ ಭಾವನೆ ಅರ್ಥಮಾಡಿಕೊಳ್ಳಬಲ್ಲದು ಈ ರೋಬೋಟ್‌; ಚೆನ್ನೈನ 13ರ ಬಾಲಕನನಿಂದ ವಿಶಿಷ್ಟ ಸಾಧನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮನುಷ್ಯರ ಭಾವನೆ ಅರ್ಥಮಾಡಿಕೊಳ್ಳಬಲ್ಲದು ಈ ರೋಬೋಟ್‌; ಚೆನ್ನೈನ 13ರ ಬಾಲಕನನಿಂದ ವಿಶಿಷ್ಟ ಸಾಧನೆ

A 13-year-old Tamil Nadu boy creates a robot with emotions in Chennai. (ANI)

ನಾವು ಹೇಳಿದ ಕೆಲಸವನ್ನು ಚಾಚೂ ತಪ್ಪದೆ ಮಾಡುವುದೇ ರೋಬೋಟ್‌ಗಳ ವಿಶೇಷತೆ. ಮನುಷ್ಯರ ಸೂಚನೆಯಂತೆ ಬದುಕುವ ರೋಬೋಗಳಿಗೆ ಭಾವನೆಯೇ ಇಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ ಇದನ್ನು ಚೆನ್ನೈನ ವಿದ್ಯಾರ್ಥಿಯೊಬ್ಬ ಸುಳ್ಳೆಂದು ಸಾಬೀತು ಮಾಡಿದ್ದಾನೆ. ಮನುಷ್ಯರ ಭಾವನೆಗಳನ್ನೂ ಅರ್ಥ ಮಾಡಿಕೊಳ್ಳಬಲ್ಲ ರೋಬೋಟ್‌ ಒಂದನ್ನು ಆವಿಷ್ಕರಿಸಿದ್ದಾನೆ. ಈ ಸಾಧನೆ ಮಾಡಿರೋ ವಿದ್ಯಾರ್ಥಿಯ ಹೆಸರು ಪ್ರತೀಕ್‌.

ರೋಬೋಟ್‌ಗಳ ವ್ಯಾಖ್ಯಾನವನ್ನೇ ಈತ ಬದಲಿಸಿದ್ದಾನೆ. ಈತ ವಿನ್ಯಾಸ ಮಾಡಿರುವುದು ‘ರೋಬೋಟ್ ವಿತ್ ಎಮೋಷನ್ಸ್’. ಭಾವನೆಗಳನ್ನು ಹೊಂದಿರುವ ರೋಬೋಟ್‌ಗೆ “ರಫಿ” ಎಂದು ಹೆಸರಿಟ್ಟಿದ್ದಾನೆ.ಈ ರೋಬೋಟ್‌ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತದೆ. ನೀವು ಅದನ್ನು ಗದರಿಸಿದರೆ ಕ್ಷಮೆ ಕೇಳುವವರೆಗೂ ಪ್ರತಿಕ್ರಿಯಿಸುವುದೇ ಇಲ್ಲ. ನೀವು ದುಃಖಿತರಾಗಿದ್ದರೆ ಈ ರೋಬೋಟ್‌ ನಿಮ್ಮ ಮುಖದ ಭಾವನೆ ಮತ್ತು ಮನಸ್ಸನ್ನು ಓದುತ್ತದೆ ಎಂದು ಪ್ರತೀಕ್‌ ಹೇಳಿದ್ದಾನೆ.

ತಂತ್ರಜ್ಞಾನವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ 13 ವರ್ಷದ ಈ ಬಾಲಕನ ಸಾಧನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರೋಬೋಟ್ ಮುಖಗಳು ಮತ್ತು ಧ್ವನಿಗಳ ಅಂತರ್ಗತ ಡೇಟಾವನ್ನು ಹೊಂದಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತವು ಸಾಕಷ್ಟು ಪ್ರತಿಭಾವಂತರನ್ನು ಹೊಂದಿದೆ ಎಂದು ಹೆಮ್ಮೆಪಟ್ಟುಕೊಂಡಿದ್ದಾರೆ. 13ನೇ ವಯಸ್ಸಿನಲ್ಲಿಯೇ ಇಂತಹ ವಿಶಿಷ್ಟವಾದ ರೋಬೋಟ್‌ ಆವಿಷ್ಕರಿಸುವುದು ನಿಜಕ್ಕೂ ಬಹುದೊಡ್ಡ ಸಾಧನೆ ಎಂದು ಕೊಂಡಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...