ಭಾರತೀಯ ರೈಲ್ವೇ ಈಗ ದೇಶಾದ್ಯಂತ ಡೋರ್ ಟು ಡೋರ್ ಪಾರ್ಸೆಲ್ ಡೆಲಿವರಿ ಸೌಲಭ್ಯಗಳನ್ನು ಒದಗಿಸಲಿದೆ. ಇದು ಪಾರ್ಸೆಲ್ ವಲಯಕ್ಕೂ ಉತ್ತೇಜನ ನೀಡಲಿದೆ.
ಭಾರತೀಯ ಅಂಚೆ ಮತ್ತು ಭಾರತೀಯ ರೈಲ್ವೇಗಳ ಜಂಟಿ ಪಾರ್ಸೆಲ್ ಉತ್ಪನ್ನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಇದರಲ್ಲಿ ಮೊದಲ ಮೈಲಿ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಅಂಚೆ ಇಲಾಖೆಯಿಂದ ಒದಗಿಸಲಾಗುತ್ತದೆ ಮತ್ತು ನಿಲ್ದಾಣದಿಂದ ನಿಲ್ದಾಣಕ್ಕೆ ಮಧ್ಯಂತರ ಸಂಪರ್ಕವನ್ನು ರೈಲ್ವೆ ಮೂಲಕ ಮಾಡಲಾಗುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದರು.
ಇದೊಂದು ಪ್ರಾಯೋಗಿಕ ಯೋಜನೆಯ ಆಧಾರದ ಮೇಲೆ ಪ್ರಾರಂಭವಾಗಿದೆ. ಪ್ರಾಯೋಗಿಕ ಯೋಜನೆಯ ಮೊದಲನೆಯ ಸೇವೆಯು ಮಾರ್ಚ್ 31ರಿಂದ ಸೂರತ್ನಿಂದ ವಾರಣಾಸಿಗೆ ಆರಂಭಗೊಂಡಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
JPP ಸಂಪೂರ್ಣ ಪಾರ್ಸೆಲ್ ನಿರ್ವಹಣೆ ಪರಿಹಾರವನ್ನು ಒದಗಿಸುವ ಮೂಲಕ ವ್ಯಾಪಾರದಿಂದ ವ್ಯಾಪಾರ ಮತ್ತು ವ್ಯಾಪಾರದಿಂದ ಗ್ರಾಹಕರ ಮಾರುಕಟ್ಟೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.