ಬೆಳಗಾವಿ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲ್ಕರ್ಣಿ ಮತ್ತೆ ವಿವಾದಕ್ಕೀಡಾಗಿದ್ದಾರೆ. ಜೈಲಿನಲ್ಲಿ ರಾಜಾತಿಥ್ಯ ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ವಿನಯ್ ಕುಲ್ಕರ್ಣಿ ವಿರುದ್ಧ ಕೇಳಿಬಂದಿತ್ತು. ಇದೀಗ ಇನ್ನೊಂದು ವಿವಾದ ಎಳೆದುಕೊಂಡಿದ್ದಾರೆ.
ಬೆಳಗಾವಿ ಹಿಂಡಲಗಾ ಜೈಲಿನಲ್ಲಿರುವ ವಿನಯ್ ಕುಲ್ಕರ್ಣಿ, ರೌಡಿ ಶೀಟರ್ ವಿಕ್ಕಿ ಪೂಜಾರಿ ಜೊತೆ ಕಾಲ ಕಳೆಯುತ್ತಿದ್ದಾರೆ. ಮಂಗಳೂರು ಮೂಲದ ರೌಡಿ ಶೀಟರ್ ವಿಕ್ಕಿ ಪೂಜಾರಿ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಹಾಗೂ ಸಹಚರರ ಮೂಲಕ ಜೈಲಿನಲ್ಲೇ ಆರೋಪಿಯೊಬ್ಬರನ್ನು ಹತ್ಯೆ ಮಾಡಿರುವ ಪ್ರಕರಣವಿದ್ದು, ಹಲವು ವರ್ಷಗಳಿಂದ ವಿಕ್ಕಿ ಜೈಲುವಾಸ ಅನುಭವಿಸುತ್ತಿದ್ದಾನೆ.
ಇದೀಗ ವಿಕ್ಕಿ ಪೂಜಾರಿಯನ್ನು ತಮ್ಮ ಸೆಲ್ ಗೆ ಕರೆಸಿಕೊಂಡು ವಿನಯ್ ಕುಲ್ಕರ್ಣಿ ಸ್ನೇಹದಿಂದ ಇದ್ದಾರೆ. ಅಲ್ಲದೇ ವಿನಯ್ ಕುಲ್ಕರ್ಣಿಗೆ ವಿಕ್ಕಿ ಎಲ್ಲಾ ರೀತಿಯ ಸಹಾಯಮಾಡುತ್ತಿದ್ದಾರೆ ಎನ್ನಲಾಗಿದೆ.