ಮಂಗಳೂರು: ಇತ್ತೀಚೆಗಷ್ಟೇ ರೌಡಿ ಶೀಟರ್ ಸೈಲೆಂಟ್ ಸುನೀಲನ ಜೊತೆ ವೇದಿಕೆ ಹಂಚಿಕೊಳ್ಳುವ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಸಂಸದ ತೇಜಸ್ವಿ ಸೂರ್ಯ, ಇದೀಗ ಮತ್ತೊಂದು ವಿವಾದವನ್ನು ಎಳೆದುಕೊಂಡಿದ್ದಾರೆ.
ತುಳುನಾಡಿನ ಆರಾಧ್ಯ ದೇವರು ದೈವ ನೃತ್ಯ ಮಾಡುವವರ ಬಳಿ ನಿಂತು ಸಂಸದರು ಫೋಸು ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಪ್ಪಲಿ ತೆಗೆಯದೇ ದೈವದ ಬಳಿ ನಿಂತು ದೈವಕ್ಕೆ ಅಪಮಾನ ಮಾಡಿದ್ದಾರೆ ಎಂಬ ಆಕ್ರೋಶ ಕೇಳಿಬಂದಿದೆ.
ಬಿಜೆಪಿ ನಾಯಕರು ಸದಾ ದೇವರು, ಆಚಾರ-ವಿಚಾರಗಳ ಸಂಸ್ಕೃತಿ ಬಗ್ಗೆ ಮಾತನಾಡುವವರು, ಈಗ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರೇ ಹೀಗೆ ದೈವದ ಬಳಿ ಚಪ್ಪಲಿ ಹಾಕಿಕೊಂಡು ಪೋಸು ನೀಡುತ್ತಿರುವುದು ಎಷ್ಟು ಸರಿ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.