ಡಿಜಿಟಲ್ ಗೆ ಹೆಚ್ಚು ಒತ್ತು ನೀಡಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಸಾಕಷ್ಟು ಕಡೆಗಳಲ್ಲಿ ಪೇಪರ್ ರಹಿತವಾಗಿ ಕೆಲಸ ಕಾರ್ಯ ಮಾಡುತ್ತಿದೆ. ಅದರ ಮುಂದುವರೆದ ಭಾಗವಾಗಿ ಇದೀಗ ರೈಲ್ವೇ ಇಲಾಖೆಯಲ್ಲಿ ಪೇಪರ್ ರಹಿತ ವ್ಯವಸ್ಥೆ ತರಲು ಮುಂದಾಗಿದೆ.
ಹೌದು, ಭರತೀಯ ರೈಲ್ವೇ ಇಲಾಖೆಯು ಶೀಘ್ರವಾಗಿ ಕಾಗದ ರಹಿತ ಇಲಾಖೆಯಾಗಲಿದೆ. ಪರಿಣಾಮಕಾರಿಯಾಗಿ ಹಾಗೂ ತ್ವರಿತವಾಗಿ ಕೆಲಸ ಮಾಡಬೇಕು ಎಂಬ ನಿಟ್ಟಿನಲ್ಲಿ ಈ ನಿರ್ಧಾರ ಮಾಡಿದೆ ಸರ್ಕಾರ. ಈಗಾಗಲೇ ಅಂದರೆ ನವೆಂಬರ್ 1 ರಿಂದಲೇ ವ್ಯವಹಾರ ಹಾಗೂ ಕಡತ ಪ್ರಕ್ರಿಯೆಯಲ್ಲಿ ಡಿಜಿಟಲೀಕರಣ ಮಾಡಲಾಗುತ್ತಿದೆ.
ಕೆಲಸದಲ್ಲಿ ಡಿಜಿಟಲೀಕರಣ ಮಾಡುವಂತೆ ಎಲ್ಲಾ ಮ್ಯಾನೇಜರ್ ಗಳಿಗೆ ತಿಳಿಸಲಾಗಿದೆ ಎಂದು ರೈಲ್ವೇ ಮಂಡಳಿಯ ಮುಖ್ಯಸ್ಥ ತ್ರಿಪಾಠಿ ತಿಳಿಸಿದ್ದಾರೆ. ಇನ್ನು ಬಹುತೇಕ ಎಲ್ಲಾ ಕೆಲಸದಲ್ಲಿ ಕಾಗದ ರಹಿತ ಇರಲಿದ್ದು, ಕೆಲವೇ ಕೆಲವು ಸಂದರ್ಭಗಳಲ್ಲಿ ಮಾತ್ರ ಕಾಗದ ಕಡತಗಳಿಗೆ ಅವಕಾಶ ಸಿಗಲಿದೆಯಂತೆ.