ಮಾರುತಿ ಸುಜುಕಿ ಕಂಪನಿ ಹೊಸ ಆಲ್ಟೊ ಕೆ10 ಎಸ್-ಸಿಎನ್‌ಜಿ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದನ್ನು ಕೇವಲ ಒಂದು ರೂಪಾಂತರದಲ್ಲಿ ಲಾಂಚ್ ಮಾಡಲಾಗಿದೆ. ಈ ಸಿಎನ್‌ಜಿ ಕಾರಿನ ಆರಂಭಿಕ ಬೆಲೆ 5,94,500 ರೂಪಾಯಿ. ಎಲ್ಲಾ ಹೊಸ ಆಲ್ಟೊ K10 S-CNG ಮುಂದಿನ ಜನರೇಶನ್ K ಸರಣಿ 1 ಲೀಟರ್ ಜೆಟ್, ಡ್ಯುಯಲ್ VVT ಎಂಜಿನ್ ಅನ್ನು ಹೊಂದಿರುತ್ತದೆ.
ಇದು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಾಗಲಿದೆ. Alto K10 S-CNG ಕಾರು ಪ್ರತಿ ಕೆಜಿಗೆ 33.85 ಕಿಮೀ ಮೈಲೇಜ್ ನೀಡುತ್ತದೆ. ಕಂಪನಿ ಇದುವರೆಗೆ 10 ಲಕ್ಷಕ್ಕೂ ಹೆಚ್ಚು ಎಸ್-ಸಿಎನ್‌ಜಿ ವಾಹನಗಳನ್ನು ಚಿಲ್ಲರೆ ಮಾರಾಟ ಮಾಡಿರೋದಾಗಿ ಮಾರುತಿ ಸುಜುಕಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ಆಲ್ಟೊ ಕೆ10 ಸಿಎನ್‌ಜಿ ಕಂಪನಿಯ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಉತ್ತೇಜಿಸುತ್ತದೆ ಮತ್ತು ಅದರ ವ್ಯಾಪಕ ಅಳವಡಿಕೆಗೆ ಸಹಾಯ ಮಾಡಲಿದೆ.
ಸ್ಟ್ಯಾಂಡರ್ಡ್ VXi ಪೆಟ್ರೋಲ್ ರೂಪಾಂತರದಂತೆಯೇ CNG ರೂಪಾಂತರವು ಬ್ಲೂಟೂತ್ ಸಂಪರ್ಕದೊಂದಿಗೆ 2-DIN ಸ್ಮಾರ್ಟ್‌ಪ್ಲೇ ಆಡಿಯೊ ಸಿಸ್ಟಮ್ ಅನ್ನು ಹೊಂದಿದೆ. 2 ಸ್ಪೀಕರ್‌ಗಳು, ಇಂಪ್ಯಾಕ್ಟ್ ಸೆನ್ಸಿಂಗ್ ಡೋರ್ ಅನ್‌ಲಾಕ್, ಸೆಂಟ್ರಲ್ ಲಾಕಿಂಗ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್, ಮ್ಯಾನ್ಯುವಲ್ ಅಡ್ಜಸ್ಟ್ ಮಾಡಬಹುದಾದ ವಿಂಗ್ ಮಿರರ್‌ಗಳು, AUX ಮತ್ತು USB ಪೋರ್ಟ್‌ಗಳು, ಫ್ರಂಟ್ ಪವರ್ ವೈಶಿಷ್ಟ್ಯಗಳುಳ್ಳ ವಿಂಡೋ ಇವೆಲ್ಲವೂ ಲಭ್ಯವಿವೆ. ಪ್ರಸ್ತುತ ಮಾರುತಿ ಆಲ್ಟೊ K10 ನಾಲ್ಕು ಮ್ಯಾನುವಲ್ ಮತ್ತು ಎರಡು AMT ರೂಪಾಂತರಗಳಲ್ಲಿ ಲಭ್ಯವಿದೆ.
Std, LXi, VXi ಮತ್ತು VXi+ ಮ್ಯಾನುವಲ್ ರೂಪಾಂತರಗಳಿವೆ. ಇವುಗಳ ಬೆಲೆ ಕ್ರಮವಾಗಿ 3.99 ಲಕ್ಷ ರೂ., 4.82 ಲಕ್ಷ, 5 ಲಕ್ಷ ಮತ್ತು 5.34 ಲಕ್ಷ ರೂಪಾಯಿ. ಆದರೆ VXi AMT ಮಾದರಿಯ ಬೆಲೆ 5.50 ಲಕ್ಷ ರೂಪಾಯಿ ಇದ್ದರೆ, VXi+ AMT ರೂಪಾಂತರದ ಬೆಲೆ 5.84 ಲಕ್ಷ ರೂಪಾಯಿ ಇದೆ. ಈ ಸಾಲಿಗೆ VXi CNG ವೇರಿಯಂಟ್ ಕೂಡ ಸೇರ್ಪಡೆಯಾಗಿದೆ.ಹೊಸ ಆಲ್ಟೊ ಕೆ10 ಸಿಎನ್‌ಜಿ ಬಿಡುಗಡೆಯೊಂದಿಗೆ ಇಂಡೋ-ಜಪಾನೀಸ್ ಕಾರ್‌ಮೇಕರ್ ಈಗ ತನ್ನ ಉತ್ಪನ್ನ ಪೋರ್ಟ್‌ಫೋಲಿಯೊದಲ್ಲಿ ಒಟ್ಟು 13 ಎಸ್-ಸಿಎನ್‌ಜಿ ಮಾದರಿಗಳನ್ನು ಹೊಂದಿದೆ. ಇವುಗಳಲ್ಲಿ ಆಲ್ಟೊ, ಆಲ್ಟೊ ಕೆ10, ಎಸ್-ಪ್ರೆಸ್ಸೊ, ವ್ಯಾಗನಾರ್, ಇಕೊ, ಸೆಲೆರಿಯೊ, ಸ್ವಿಫ್ಟ್, ಡಿಸಾಯರ್, ಎರಿಟಿಗಾ, ಬಲೆನೊ, ಎಕ್ಸ್‌ಎಲ್ 6, ಸೂಪರ್ ಕ್ಯಾರಿ ಮತ್ತು ಟೂರ್ ಎಸ್ ಸೇರಿವೆ.