ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದು ಮತ್ತೆ ಮೂರು ಬಾರಿ ಭೂಕಂಪನವಾಗಿದ್ದು, ಜಿಲ್ಲೆಯಾದ್ಯಂತ ಆತಂಕ ಮನೆ ಮಾಡಿದೆ.
ಚಿಕ್ಕಬಳ್ಳಾಪುರದ ಕೆಲವೆಡೆಗಳಲ್ಲಿ ನಿನ್ನೆಯಷ್ಟೇ 2.6 ರಷ್ಟು ತೀವ್ರತೆಯ ಭೂಕಂಪನವಾಗಿತ್ತು. ಇದರ ಬೆನ್ನಲ್ಲೇ ಇದೀಗ ಮತ್ತೆ ಮೂರು ಬಾರಿ ಭೂಮಿ ಕಂಪಿಸಿದ್ದು, ಮಧ್ಯಾಹ್ನ 2.15ಕ್ಕೆ, 2.17ಕ್ಕೆ ಹಾಗೂ 2.25ಕ್ಕೆ ಭೂಮಿ ಕಂಪಿಸಿದೆ.
ಜಗತ್ತೇ ನಿಟ್ಟುಸಿರು ಬಿಡುವ ಸುದ್ದಿ ಇದು…! ದಕ್ಷಿಣ ಆಫ್ರಿಕಾದಲ್ಲಿ ದಿನೇ ದಿನೇ ಕಡಿಮೆಯಾಗುತ್ತಿದೆ ಓಮಿಕ್ರಾನ್ ಸೋಂಕಿತರ ಸಂಖ್ಯೆ
ರಿಕ್ಟರ್ ಮಾಪಕದಲ್ಲಿ 3.6ರಷ್ಟು ತೀವ್ರತೆ ದಾಖಲಾಗಿದ್ದು, ಶೆಟ್ಟಿಹಳ್ಳಿ ಗ್ರಾಮದ ಹಲವೆಡೆ ಮನೆಗಳ ಗೋಡೆ ಬಿರುಕು ಬಿಟ್ಟಿದೆ. ಭೂಕಂಪದಿಂದಾಗಿ ಜನರು ಮನೆಗಳಿಂದ ಹೊರಗೋಡಿಬಂದಿದ್ದು, ಗ್ರಾಮದಲ್ಲಿ ಪದೇ ಪದೇ ಸಂಭವಿಸುತ್ತಿರುವ ಭೂಕಂಪಕ್ಕೆ ಜನರು ಭಯಭೀತರಾಗಿದ್ದಾರೆ.