ತುಮಕೂರು: ನಾನು ಜೆಡಿಎಸ್ ಪಕ್ಷಕ್ಕೆ ಮತ್ತೆ ವಾಪಸ್ ಹೋಗುವುದಿಲ್ಲ. ನನ್ನನ್ನು ಎದುರಿಸುವ ಧೈರ್ಯ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಇಲ್ಲ ಎಂದು ಜೆಡಿಎಸ್ ಉಚ್ಛಾಟಿತ ಶಾಸಕ ಶ್ರೀನಿವಾಸ್ ತಿಳಿಸಿದ್ದಾರೆ.
ಗುಬ್ಬಿಯಲ್ಲಿ ಮಾತನಾಡಿದ ಶ್ರೀನಿವಾಸ್, ಮತ್ತೆ ಜೆಡಿಎಸ್ ನಲ್ಲಿಯೇ ಇರಲು ನಾನು ಜಿ.ಟಿ. ದೇವೇಗೌಡ ಅಲ್ಲ. ನಾನು ದುಷ್ಯಂತನೂ ಅಲ್ಲ. ನಮ್ಮ ತಂದೆಯ ಮಾತನ್ನೇ ಕೇಳಲ್ಲ ನಾನು ಎಂದು ಹೇಳಿದ್ದಾರೆ.
ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀನಿವಾಸ್, ಸ್ನೇಹಪೂರ್ವಕವಾಗಿ ಸಾ.ರಾ. ಮಹೇಶ್ ನನ್ನ ಮನೆಗೆ ಬಂದಿದ್ದರು ಅಷ್ಟೇ. ಮತ್ತೆ ನಾನು ಜೆಡಿಎಸ್ ಗೆ ಹೋಗುವ ಪ್ರಶ್ನೆ ಇಲ್ಲ. ನನ್ನನ್ನು ಪಕ್ಷದಿಂದ ಉಚ್ಛಾಟಿಸಿದ್ದು ಮುಗಿದ ಅಧ್ಯಾಯ ಎಂದು ಹೇಳಿದರು.