ತಿರುವನಂತಪುರಂ: ಕೇರಳಕ್ಕೆ ಮತ್ತೆ ನಿಫಾ ವೈರಸ್ ದಾಳಿ ನಡೆಸಿದ್ದು, 12 ವರ್ಷದ ಬಾಲಕನೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ನಿಫಾ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಸೆ.1ರಂದು ಕೋಯಿಕ್ಕೋಡ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಬಾಲಕನ ಸ್ಯಾಂಪಲ್ ಸಂಗ್ರಹಿಸಿ ಪುಣೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿತ್ತು. ಬಾಲಕನಲ್ಲಿ ನಿಫಾ ವೈರಸ್ ದೃಢಪಟ್ಟಿತ್ತು. ಇದೀಗ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಉದ್ಯಮಿಯೊಂದಿಗೆ ಸಂಬಂಧ ಬೆಳೆಸಿದ ಮಹಿಳೆ, ಆಕೆಗೆ ಗೊತ್ತಾಗದಂತೆ ಸುಲಿಗೆಗಿಳಿದ ಮಗಳು
ರೋಗಿಯ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಲಾಗಿದ್ದು, ಈವರೆಗೂ ಬೇರೆ ಯಾರಲ್ಲೂ ಸೋಂಕು ಕಂಡುಬಂದಿಲ್ಲ. ಕಣ್ಣೂರು ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.