ಈಗಾಗಲೇ ಸರ್ಕಾರಿ ಸ್ವಾಮ್ಯದ ಹಲವು ಬ್ಯಾಂಕುಗಳನ್ನು ವಿಲೀನಗೊಳಿಸಿರುವ ಕೇಂದ್ರ ಸರ್ಕಾರ ಈಗ ಮತ್ತೊಂದು ಮಹತ್ವದ ತೀರ್ಮಾನ ಕೈಗೊಂಡಿದೆ. ಮತ್ತಷ್ಟು ಬ್ಯಾಂಕುಗಳ ವಿಲೀನಕ್ಕೆ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.
ಈ ಮೊದಲು ವಿಲೀನವಾಗಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಕುರಿತ ಅಧ್ಯಯನದ ಬಳಿಕ ಇಂತಹದೊಂದು ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.
2017ರಲ್ಲಿ ದೇಶದಲ್ಲಿ ಒಟ್ಟು 27 ಸರ್ಕಾರಿ ಬ್ಯಾಂಕುಗಳಿದ್ದು, ಅವುಗಳನ್ನು ವಿಲೀನಗೊಳಿಸಿದ ಬಳಿಕ ಈಗ ಈ ಸಂಖ್ಯೆ 12ಕ್ಕೆ ಇಳಿಕೆಯಾಗಿದೆ. ಇದೀಗ ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಷ್ಟೇ ದೊಡ್ಡದಾದ 5 ಬ್ಯಾಂಕುಗಳನ್ನಷ್ಟೇ ಹೊಂದುವ ಚಿಂತನೆಯನ್ನು ಕೇಂದ್ರ ಸರ್ಕಾರ ಹೊಂದಿದ್ದು ಇದಕ್ಕಾಗಿ ವಿಲೀನ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.