ಬೆಳಗಾವಿ: ರಾಜ್ಯದಲ್ಲಿ ಮಾತಾಂತರ ನಿಷೇಧ ಕಾಯ್ದೆ ಜಾರಿ ವಿಚಾರ ಸಾಕಷ್ಟು ಚರ್ಚೆ, ಗೊಂದಲಗಳಿಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟ ಮಾಹಿತಿ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅರಗ ಜ್ಞಾನೇಂದ್ರ, ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡೇ ಮಾಡ್ತೀವಿ. ಇದರಲ್ಲಿ ಅನುಮಾನವಿಲ್ಲ. ಕಾಯ್ದೆ ಬಗ್ಗೆ ಗೊಂದಲ ಬೇಡ. ಬಲವಂತದ ಮತಾಂತರಕ್ಕೆ ಅವಕಾಶವಿಲ್ಲ ಎಂದು ಈ ಬಗ್ಗೆ ಕಾನೂನು ಇದೆ. ಆದರೆ ಬಲವಂತದ ಮತಾಂತರ ನಡೆದರೆ ಏನು ಶಿಕ್ಷೆ ಎಂಬ ಬಗ್ಗೆ ಕಾನೂನು ಇಲ್ಲ. ಹೀಗಾಗಿ ಮತಾಂತರ ನಡೆದರೆ ಯಾವ ರೀತಿ ಶಿಕ್ಷೆಗಳು ಆಗುತ್ತೆ ಎಂಬುದರ ಬಗ್ಗೆ ಕಾನೂನು ಜಾರಿ ಮಾಡುವ ನಿಟ್ಟಿನಲ್ಲಿ ಮಸೂದೆ ಮಂಡನೆಯಾಗಲಿದೆ ಎಂದು ತಿಳಿಸಿದರು.
ಇದು ಕೇವಲ ಒಂದು ಸಮುದಾಯಕ್ಕೆ ಸಂಬಂಧಿಸಿದ ವಿಚಾರವಲ್ಲ, ಎಲ್ಲಾ ಸಮುದಾಯಗಳಿಗೂ ಅನ್ವಯವಾಗುವಂತಹ ಕಾಯ್ದೆ. ಕಾಂಗ್ರೆಸ್ ನವರು ವಿರೋಧ ಮಾಡುತ್ತಿರುವುದು ಯಾಕೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಸದನದಲ್ಲಿ ಚರ್ಚೆಯಾಗಲಿದೆ ಎಂದು ಹೇಳಿದರು.