ಬೆಂಗಳೂರು: ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಬೆಂಗಳೂರಿನ ಹೋಟೆಲ್ ಒಂದರಲ್ಲಿ ಮತದಾನ ಮಾಡಿದವರಿಗೆ ಉಚಿತ ಉಪಹಾರ ನೀಡಲಾಗುತ್ತಿರುವುದು ವಿಶೇಷ.
ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೊಟೆಲ್ ಮತದಾನ ಮಾಡಿದವರಿಗೆ ಉಚಿತ ಬೆಣ್ಣೆದೋಸೆ, ಮೈಸೂರು ಪಾಕ್ ಮತ್ತು ತಂಪು ಪಾನಿಯಗಳನ್ನು ನೀಡುವುದಾಗಿ ಘೋಷಿಸಿದೆ.
ಇನ್ನು ಚರ್ಚ್ ಸ್ಟ್ರೀಟ್ ನಲ್ಲಿರುವ ಚಾಲುಕ್ಯ ಸಾಮ್ರಾಟ್ ಕೆಫೆ ಕೂಡ ಮತದಾರರಿಗೆ ಬೆಳಿಗ್ಗೆ 7:30ರಿಂದ 11:30ರವರೆಗೆ ಉಚಿತ ಉಪಹಾರ ನೀಡಲು ನಿರ್ಧರಿಸಿದೆ.