ಹಾಸನ: ರಾಜ್ಯಾದ್ಯಂತ ಬಿರುಸಿನಿಂದ ಮತದಾನ ನಡೆಯುತ್ತಿದ್ದು, ಈ ವೇಳೆ ಮತದಾರರೊಬ್ಬರು ಮತಗಟ್ಟೆಯಲ್ಲಿಯೇ ಹೃಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. 49 ವರ್ಷದ ಜಯಣ್ಣ ಮೃತ ವ್ಯಕ್ತಿ.
ಮತದಾನ ಮಾಡಿ ಹೊರಬರುತ್ತಿದ್ದಂತೆ ಜಯಣ್ಣ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಮತಗಟ್ಟೆ ಆವರಣದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದಿಂದ ಜಯಣ್ಣ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.