ನವದೆಹಲಿ: ಮಕ್ಕಳ ಮೇಲೆ ಕೋವಿಡ್ ಲಸಿಕೆ ಪ್ರಯೋಗ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ತಜ್ಞರ ಸಮಿತಿಯಿಂದ ಮಕ್ಕಳ ಮೇಲೆ ಪ್ರಯೋಗ ಮಾಡದಂತೆ ಮನವಿ ಮಾಡಲಾಗಿದೆ.
ಕೋವ್ಯಾಕ್ಸಿನ್ ಲಸಿಕೆ ಮಕ್ಕಳ ಮೆಲೆ ಪ್ರಯೋಗ ಮಾಡಲು ಪುಣೆಯ ಸೆರಮ್ ಇನ್ ಸ್ಟಿಟ್ಯೂಟ್ ಗೆ ಅವಕಾಶ ಕೊಡಬೇಡಿ ಎಂದು ತಜ್ಞರ ಸಮಿತಿ ಡಿಸಿಜಿಐಗೆ ಶಿಫಾರಸು ಮಾಡಿದೆ.
2-17 ವರ್ಷದ ಮಕ್ಕಳ ಮೇಲೆ ಕೋವ್ಯಾಕ್ಸಿನ್ 2 ಹಾಗೂ 3ನೇ ಹಂತದ ಪ್ರಯೋಗಕ್ಕೆ ಸೆರಮ್ ಮುಂದಾಗಿತ್ತು. ಆದರೆ ಈಗಲೇ ಮಕ್ಕಳ ಮೇಲೆ ಪ್ರಯೋಗ ಮಾಡಲು ಅವಕಾಶ ನೀಡಬಾರದು ಎಂದು ಡಿಸಿಜಿಐಗೆ ಮನವಿ ಮಾಡಲಾಗಿದೆ.
ಮೊದಲು ವಯಸ್ಕರರ ಮೇಲೆ ಪ್ರಯೋಗ ಪೂರ್ಣಗೊಳ್ಳಲಿ ನಂತರದಲ್ಲಿ ಮಕ್ಕಳ ಮೇಲೆ ಲಸಿಕೆ ಪ್ರಯೋಗ ಮುಂದುವರೆಸುವುದು ಉತ್ತಮ ಎಂದು ಕೇಂದ್ರ ತಜ್ಞರ ಸಮಿತಿ ಅಭಿಪ್ರಾಯಪಟ್ಟಿದೆ.