alex Certify BIG NEWS; ಮಕ್ಕಳಿಗೆ ‘ಕೊರೊನಾ ಲಸಿಕೆ’ ಕುರಿತಂತೆ ಮಹತ್ವದ ಮಾಹಿತಿ ಹೊರಹಾಕಿದ ವೈದ್ಯರ ತಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS; ಮಕ್ಕಳಿಗೆ ‘ಕೊರೊನಾ ಲಸಿಕೆ’ ಕುರಿತಂತೆ ಮಹತ್ವದ ಮಾಹಿತಿ ಹೊರಹಾಕಿದ ವೈದ್ಯರ ತಂಡ

ಅನೇಕ ಪೋಷಕರು ತಮ್ಮ ಮಕ್ಕಳಿಗೆ ಕೋವಿಡ್​ ಲಸಿಕೆಯನ್ನು ಹಾಕಿಸಬೇಕು ಎಂದು ಕಾತುರರಾಗಿದ್ದಾರೆ. ಆದರೆ ಕೆಲವರು ಮಕ್ಕಳಿಗೆ ಕೋವಿಡ್​ ಲಸಿಕೆ ನೀಡುವ ಕ್ರಮವನ್ನು ವಿರೋಧಿಸುತ್ತಿದ್ದಾರೆ. ಮಕ್ಕಳಿಗೆ ಕೋವಿಡ್​ ಲಸಿಕೆ ನೀಡುವುದನ್ನು ವಿರೋಧಿಸಿ ಸುಮಾರು 1000 ಮಂದಿಯ ಸಹಿ ಇರುವ ಪತ್ರವನ್ನು ಪ್ರಧಾನಿ ಮೋದಿಗೆ ಕಳುಹಿಸಲಾಗಿದೆ.

ಈ ಪತ್ರದ ಮೂಲಕ ಮಕ್ಕಳಿಗೆ ಕೋವಿಡ್​ 19 ಲಸಿಕೆಯ ಅಗತ್ಯವಿಲ್ಲ ಎಂಬುದನ್ನು ಮನವರಿಕೆ ಮಾಡಲು ಯತ್ನಿಸಲಾಗಿದೆ. ಈಗಾಗಲೇ ಕೋವಿಡ್​ ಸೋಂಕಿಗೆ ಒಳಗಾದ ಬಹುತೇಕ ಮಕ್ಕಳು ಯಾವುದೇ ಲಸಿಕೆಯ ಅವಶ್ಯಕತೆ ಇಲ್ಲದೆಯೇ ಸುಧಾರಿಸಿಕೊಂಡಿದ್ದಾರೆ. 56 ಪ್ರತಿಶತ ಮಕ್ಕಳ ದೇಹದಲ್ಲಿ ಆಂಟಿಬಾಡಿ ಉತ್ಪಾದನೆಯಾಗಿದೆ. ಕೊರೊನಾ ಮೂರನೇ ಅಲೆಯು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ.

ಹೂಡಿಕೆ ದುಪ್ಪಟ್ಟಾಗುವ ಅವಧಿ ಲೆಕ್ಕ ಹಾಕುತ್ತಿದ್ದೀರಾ..? ಇಲ್ಲಿದೆ ರೂಲ್‌ 72 ರ ಕುರಿತ ಮಾಹಿತಿ

ಮಕ್ಕಳು ನೈಸರ್ಗಿಕವಾಗಿಯೇ ಆಂಟಿಬಾಡಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವಾಗ ಕೋವಿಡ್​ ಲಸಿಕೆಯನ್ನು ನೀಡುವ ಅಗತ್ಯ ಏನಿದೆ ಎಂದು ವೈದ್ಯರು ಸೇರಿದಂತೆ ಅನೇಕರು ಪತ್ರದ ಮೂಲಕ ಪ್ರಶ್ನೆ ಮಾಡಿದ್ದಾರೆ. ಕೋವಿಡ್​ ಸೋಂಕಿಗೆ ಒಳಗಾದ ಮಕ್ಕಳ ದೇಹದಲ್ಲಿ ಈಗಾಗಲೇ ಆಂಟಿಬಾಡಿ ಉತ್ಪಾದನೆಯಾಗಿದೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಲಸಿಕೆ ನೀಡುವುದು ಸೂಕ್ತವಲ್ಲ ಎಂದು ಅಭಿಪ್ರಾಯ ಪಡಲಾಗಿದೆ.

ಅವೇಕನ್​ ಇಂಡಿಯಾ ಮೂವ್​ಮೆಂಟ್​ ಹಾಗೂ ಡಾಕ್ಟರ್ಸ್​ ಫಾರ್​ ಟ್ರುತ್​ ಜಂಟಿಯಾಗಿ ಈ ಪತ್ರವನ್ನು ಪ್ರಧಾನಿ ಕಚೇರಿಗೆ ಕಳುಹಿಸಿದೆ. ಈ ವಿಚಾರವಾಗಿ ಮಾತನಾಡಿದ ಅವೇಕನ್​ ಇಂಡಿಯಾ ಮೂವ್​ಮೆಂಟ್​ ಸದಸ್ಯೆ, ವೈದ್ಯೆ ಹಾಗೂ ತಾಯಿ ನಿಶಾ ಕೊಯ್ರಿ, ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಬಗ್ಗೆ ಯಾವುದೇ ವೈಜ್ಞಾನಿಕ ಪ್ರಯೋಗಗಳು ನಡೆದಿಲ್ಲ. ಮಕ್ಕಳಿಗೆ ಕೊರೊನಾ ಲಸಿಕೆ ನೀಡುವುದರಿಂದ ಸಹಾಯವೇ ಆಗಲಿದೆ ಎಂಬುದನ್ನು ಹೇಗೆ ನಂಬಲು ಸಾಧ್ಯ..? ಇದನ್ನೆಲ್ಲ ಸರ್ಕಾರ ಗಮನದಲ್ಲಿ ಇಡಬೇಕು ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...