ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಚಿವ ಸ್ಥಾನ ಮರಳಿ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದು, ಇದೀಗ ಸಿಎಂ ಬಿ ಎಸ್ ವೈ ಹಾಗೂ ರಾಜ್ಯಾಧ್ಯಕ್ಷರನ್ನು ಭೇಟಿಯಾಗಿ ಚರ್ಚಿಸಲು ಮುಂದಾಗಿದ್ದಾರೆ.
ಬ್ಲಾಕ್ ಫಂಗಸ್ ದಾಳಿಗೆ ಕತ್ತಲಾದ ಬದುಕು; ಸಂಪೂರ್ಣ ದೃಷ್ಟಿ ಕಳೆದುಕೊಂಡ 10 ಸೋಂಕಿತರು
ಈಗಾಗಲೇ ಸ್ವಾಮೀಜಿಗಳ ಮೂಲಕ ಹಾಗೂ ಆರ್.ಎಸ್.ಎಸ್.ನಾಯಕರನ್ನು ಭೇಟಿಯಾಗುವ ಮೂಲಕ ಮಂತ್ರಿ ಸ್ಥಾನಕ್ಕಾಗಿ ಒತ್ತಡದ ತಂತ್ರ ಹೆಣೆದಿರುವ ರಮೇಶ್ ಜಾರಕಿಹೊಳಿ, ಇದೀಗ ಆಪ್ತರ ಹಾಗೂ ಸಹೋದರರ ಸಲಹೆ ಮೇರೆಗೆ ಸಿಎಂ ಭೇಟಿಗೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.
OMG: ಬರ್ತಡೇ ಪಾರ್ಟಿಗೆ ಸಿಂಹದೊಂದಿಗೆ ಬಂದ ಯುವತಿ
ಎರಡು ಮೂರು ದಿನಗಳಲ್ಲಿ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾಗಲಿದ್ದು ಮಹತ್ವದ ರಾಜಕೀಯ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ಜಾರಕಿಹೊಳಿ ನಡೆ ಕುತೂಹಲಕ್ಕೆ ಕಾರಣವಾಗಿದೆ.