ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಡಿ ವಿಚಾರಣೆ ಎದುರಿಸುತ್ತಿದ್ದಾರೆ. ಇದೇ ವೇಳೆ ಇತ್ತ ಸದನದಲ್ಲಿ ಸಿದ್ದರಾಮಯ್ಯ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿ ಮುಜುಗರಕ್ಕೀಡಾಗಿದ್ದಾರೆ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿದೆ.
ಒಂದೆಡೆಯಲ್ಲಿ ಇ.ಡಿ ವಿಚಾರಣೆ ಎದುರಿಸುತ್ತಿರುವ ಡಿ.ಕೆ.ಶಿವಕುಮಾರ್, ಮತ್ತೊಂದೆಡೆಯಲ್ಲಿ ಸದನದಲ್ಲಿ ಭ್ರಷ್ಟಾಚಾರ ಕುರಿತಂತೆ ಮುಜುಗರಕ್ಕೆ ಒಳಗಾದ ಸಿದ್ದರಾಮಯ್ಯ, ಈಗ
ರಾಜ್ಯದ ಜನರ ಮುಂದೆ ಇವರ ನಾಟಕಕ್ಕೆ ತೆರೆ ಬಿದ್ದಿದೆ ಪಕ್ಷದ ಅಧ್ಯಕ್ಷರೇ ಬೇಲ್ ಮೇಲೆ ಇರುವ ಕಾಂಗ್ರೆಸ್ ಪಕ್ಷಕ್ಕೆ ಇವರಿಬ್ಬರು ಭ್ರಷ್ಟಾಚಾರದ ಮೂಲಕ ಘನತೆ ಹೆಚ್ಚಿಸಿದ್ದಾರೆ ಎಂದು ವ್ಯಂಗ್ಯವಾಡಿದೆ.
ಅಲ್ಲದೇ ಟ್ವಿಟರ್ ನಲ್ಲಿ ಭ್ರಷ್ಟಾಚಾರದ ಗೇಟ್ ಕೀಪರ್ ಗಳು; ಸಿದ್ದರಾಮಯ್ಯ-ಡಿಕೆಶಿ ಎಂದು ವಿಡಿಯೋ ಬಿಡುಗಡೆ ಮಾಡಿದೆ.