ಮೈಸೂರು: ಪೇಸಿಎಂ ಅಭಿಯಾನಕ್ಕೆ ಮಠಾಧೀಶರ ವಿರೋಧ ವಿಚಾರವಾಗಿ ಮಾತನಾಡಿರುವ ವಿಪಕ್ಷ ನಾಯಕ ಸಿದ್ದಾರಮಯ್ಯ, ಭ್ರಷ್ಟಾಚಾರಕ್ಕೆ ಜಾತಿ ಬಣ್ಣ ಹಚ್ಚುವುದು ತಪ್ಪು ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಪೇಸಿಎಂ ಅಭಿಯಾನಕ್ಕೆ ಮಠಾಧೀಶರು ವಿರೋಧಿಸುತ್ತಿರುವುದು ಯಾಕೆ? ಸರ್ಕಾರದ ಭ್ರಷ್ಟಾಚಾರದ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಭ್ರಷ್ಟಾಚಾರಕ್ಕೆ ಜಾತಿ ಬಣ್ಣ ಬಳಿಯುತ್ತಿರುವುದು ಯಾಕೆ? ನನ್ನ ಜಾತಿಯವರು ಭ್ರಷ್ಟಾರ ಮಾಡುಅಂತ ಹೇಳಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ನಾನು ಭ್ರಷ್ಟಾಚಾರ ಮಾಡಿದರೆ ಜಾತಿಯವರೆಲ್ಲ ಭ್ರಷ್ಟರಾಗುತ್ತಾರಾ? ಮೋದಿ ಏನು ಹೇಳ್ತಾರೆ ನಾ ಖಾವೂಂಗಾ ನಾ ಖಾನೆದೂಂಗಾ ಈಗ ಇವರು ಮಾಡಿದ ಭ್ರಷ್ಟಾಚಾರವನ್ನು ಸಮರ್ಥನೆ ಮಾಡಿಕೊಳ್ತಾರಾ? ಬಿಜೆಪಿಯವರು ಕೆಟ್ಟ ರಾಜಕಾರಣ ಮಾಡುವವರು ಎಂದು ವಾಗ್ದಾಳಿ ನಡೆಸಿದ್ದಾರೆ.