ಬೆಂಗಳೂರು: ಪರಿಹಾರ, ಸಾಂತ್ವನ ಹೇಳುವ ನಿಟ್ಟಿನಲ್ಲಿಯೂ ತಾರತಮ್ಯ ಮಾಡುವ ಮೂಲಕ ಭಾವನಾತ್ಮಕ ವಿಷಯಗಳ ಮೇಲೆ ರಾಜಕಿಯ ಮಾಡುವುದು ಸರಿಯಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಕರಾವಳಿ ಜಿಲ್ಲೆಯಲ್ಲಿ ಸರಣಿ ಹತ್ಯೆ ಪ್ರಕರಣ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರದಿಂದ ಎರಡು ಸಮುದಾಯಗಳನ್ನು ಬೆಸೆಯುವ ಕೆಲಸ ನಡೆಯುತ್ತಿಲ್ಲ, ಸಿಎಂ ಬೊಮ್ಮಾಯಿ ಅವರ ಈ ರೀತಿ ಮಂಗಳೂರು ಭೇಟಿ ನಿರೀಕ್ಷಿಸಿರಲಿಲ್ಲ. ವೋಟ್ ಗಾಗಿ ಕೆಲ ರಾಜಕೀಯ ಪಕ್ಷಗಳು ಭಾವನಾತ್ಮಕ ವಿಚಾರದ ಮೇಲೆ ರಾಜಕೀಯ ಮಾಡಲು ಹೊರಟಿವೆ. ಇದು ಸೂಕ್ತವಲ್ಲ ಎಂದು ಕಿಡಿಕಾರಿದರು.
ನಾನು ನಾಳೆ ಮಂಗಳೂರಿಗೆ ತೆರಳುತ್ತಿದ್ದೇನೆ. ಹತ್ಯೆಯಾದ ಮೂರು ಕುಟುಂಬಗಳನ್ನು ಭೇಟಿಯಾಗಿ ಸಾಂತ್ವನ ಹೇಳುತ್ತೇನೆ. ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಂಘಟನೆ ಮಾಡಲಿ ಆದರೆ ಈ ರೀತಿ ಹತ್ಯೆ ಮಾಡುವುದರಿಂದ ಸಂಘಟನೆ ಸಾಧ್ಯವಿಲ್ಲ ಎಂದು ಹೇಳಿದರು.