ಬೆಂಗಳೂರು: ರಾಜಧಾನಿ ಬೆಂಗಳೂರು ಮಹಾಮಳೆಗೆ ತತ್ತರಿಸಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಸಿಎಂ ಬಸವರಾಜ್ ಬೊಮ್ಮಾಯಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲು ಸಿಟಿ ರೌಂಡ್ಸ್ ಹೊರಟಿದ್ದಾರೆ.
ಭಾರಿ ಮಳೆ ನಡುವೆಯೇ ಸಿಎಂ ಬಸವರಾಜ್ ಬೊಮ್ಮಾಯಿ ಬಿಎಂಟಿಸಿ ಬಸ್ ನಲ್ಲಿ ಎರಡನೇ ದಿನ ಸಿಟಿ ರೌಂಡ್ಸ್ ಆರಂಭಿಸಿದ್ದಾರೆ. ಹೆಬ್ಬಾಳದ ಎಸ್ ಟಿ ಪಿಗೆ ಭೇಟಿ ನೀಡಲಿರುವ ಸಿಎಂ ಸ್ಥಳೀಯರಿಂದ ಮಳೆ ಹಾನಿ ಮಾಹಿತಿ ಪಡೆಯಲಿದ್ದಾರೆ.
ಜೆ.ಸಿ.ನಗರ, ಕಮಲಾನಗರ, ನಾಗವಾರ, ಹೆಚ್ಎಸ್ಆರ್ ಲೇಔಟ್ ಸೇರಿದಂತೆ ಮಳೆಯಿಂದ ಸಂಕಷ್ಟಕ್ಕೀಡಾದ ಪ್ರದೇಶಗಳಿಗೆ ಭೇಟಿ ನೀಡಲಿದ್ದು, ಜನರ ಸಮಸ್ಯೆ ಆಲಿಸಲಿದ್ದಾರೆ. ಸಚಿವ ಬೈರತಿ ಬಸವರಾಜ್, ಸಂಸದ ಪಿ.ಸಿ.ಮೋಹನ್, ಬೆಂಗಳೂರು ಪೊಲೀಸ್ ಕಮೀಷ್ನರ್ ಪ್ರತಾಪ್ ರೆಡ್ಡಿ ಸಿಎಂ ಬೊಮ್ಮಾಯಿಗೆ ಸಾಥ್ ನೀಡಿದ್ದಾರೆ.