ಬಳ್ಳಾರಿ: ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆಂಟ್ ಶಾಕ್ ಹೊಡೆದ ಘಟನೆ ನಡೆದಿದೆ.
ಬಳ್ಳಾರಿಯಲ್ಲಿ ನಿನ್ನೆ ನಡೆದ ಬೃಹತ್ ಸಮಾವೇಶದ ಬಳಿಕ ಇಂದು ಇನ್ನಷ್ಟು ಉತ್ಸಾಹದೊಂದಿಗೆ ಸಂಗನಕಲ್ಲು ಮಾರ್ಗವಾಗಿ ಮೊಕಾ ಬಳಿ ಸಾಗಿರುವ ಭಾರತ್ ಜೋಡೋ ಯಾತ್ರೆ ವೇಳೆ ಕೈ ಕಾರ್ಯಕರ್ತರಿಗೆ ಕರೆಂಟ್ ಶಾಕ್ ಹೊಡೆದಿದ್ದು, ನಾಲ್ವರು ಕಾರ್ಯಕರ್ತರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜೋಡೋ ಯಾತ್ರೆಯಲ್ಲಿ ಕಬ್ಬಿಣದ ಪೈಪ್ ನಲ್ಲಿ ಬಾವುಟ ಹಿಡಿದು ಹೋಗುವಾಗ ಕಬ್ಬಿಣದ ಪೈಪ್ ವಿದ್ಯುತ್ ತಂತಿಗೆ ಸ್ಪರ್ಶಿಸಿ ವಿದ್ಯುತ್ ಪ್ರವಹಿಸಿದೆ. ನಾಲ್ವರು ಕಾಂಗ್ರೆಸ್ ಕಾರ್ಯಕರ್ತರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ.