ತುಮಕೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಪೇಸಿಎಂ ಪೋಸ್ಟರ್ ಅಭಿಯಾನ ನಡೆಸಿದ್ದ ಕಾಂಗ್ರೆಸ್ ಗೆ ರಾಜ್ಯ ಬಿಜೆಪಿ ಕಾಂಗ್ರೆಸ್ ವಿರುದ್ಧವೂ ಪೋಸ್ಟರ್ ಅಭಿಯಾನದ ಮೂಲಕವೇ ತಿರುಗೇಟು ನೀಡಿದೆ.
ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದ್ದು, ಭಾರತ್ ಜೋಡೋ ಯಾತ್ರೆ ಸಾಗುವ ಮಾರ್ಗದುದ್ದಕ್ಕೂ ರಸ್ತೆ ಇಕ್ಕೆಲಗಳಲ್ಲಿ ಬಿಜೆಪಿ ಪೋಸ್ಟರ್ ಅಂಟಿಸಿದೆ.
ನಿಮ್ಮ ರಾಜಕೀಯ ಆಟಕ್ಕೆ ಜನರನ್ನು ಬಳಸಿಕೊಳ್ಳಬೇಡಿ. ಕರುನಾಡ ಜನರನ್ನು ಕೆಣಕಿದರೆ ಕಾಂಗ್ರೆಸ್ ಮುಕ್ತ ಆಗಲಿದೆ ಎಂದು ಬಿಜೆಪಿ ಪೋಸ್ಟರ್ ಅಂಟಿಸಿದೆ.
ಮತ್ತೊಂದೆಡೆ ಪಿಎಫ್ಐ , ಎಸ್ ಡಿ ಪಿ ಐ ಮೇಲಿನ ನಿಮ್ಮ ಪ್ರೀತಿಯಿಂದಾಗಿ ನಾನು ಕೊಲೆಯಾದೆ ಎಂದು ಬರೆದಿರುವ ಬಿಜೆಪಿ ಮೃತ ಕಾರ್ಯಕರ್ತರೊಬ್ಬರ ಫೋಟೊವೊಂದನ್ನು ಹಾಕಿ ಪೋಸ್ಟರ್ ಅಂಟಿಸಲಾಗಿದೆ.
ಒಟ್ಟಾರೆ ಕಾಂಗ್ರೆಸ್ ಪೇಸಿಎಂ ಅಭಿಯಾನಕ್ಕೆ ಇದೀಗ ಬಿಜೆಪಿ ಕಾಂಗ್ರೆಸ್ ವಿರುದ್ಧ ಪೋಸ್ಟರ್ ಅಭಿಯಾನ ನಡೆಸುವ ಮೂಲಕ ಟಾಂಗ್ ನೀಡಿದೆ.