
ಕೋವಿಡ್-19 ಸೋಂಕಿತರ ಸಂಖ್ಯೆಯು ಇಳಿಮುಖವಾಗುತ್ತಾ ಸಾಗಿರುವ ಹಿನ್ನೆಲೆಯಲ್ಲಿ, ಸೋಮವಾರದಿಂದ ಕೆಲವೊಂದು ರೈಲುಗಳ ಓಡಾಟವನ್ನು ಮುಂದುವರೆಸಲು ಭಾರತೀಯ ರೈಲ್ವೇ ನಿರ್ಧರಿಸಿದೆ.
ಕೋವಿಡ್ ಎರಡನೇ ಅಲೆಯ ಕಾರಣದಿಂದಾಗಿ ಅನೇಕ ಮೇಲ್‌ಗಳು ಹಾಗೂ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ರದ್ದು ಮಾಡಲಾಗಿತ್ತು.
BIG NEWS: ಅರುಣ್ ಸಿಂಗ್ ಭೇಟಿಯಾದ ಶಾಸಕ ಅರವಿಂದ್ ಬೆಲ್ಲದ್; ಕುತೂಹಲ ಮೂಡಿಸಿದ ನಾಯಕರ ಚರ್ಚೆ
ಇದೀಗ ಪೂರ್ವ ಹಾಗೂ ಪಶ್ವಿಮ ವಲಯ ರೈಲ್ವೇಗಳು ಅನೇಕ ರೈಲುಗಳ ಸಂಚಾರ ಮರುಆರಂಭ ಮಾಡಲು ಕ್ರಮಗಳನ್ನು ತೆಗೆದುಕೊಂಡಿದ್ದು, ಈ ಸಂಬಂಧ ತಮ್ಮ ಟ್ವಿಟರ್ ಹ್ಯಾಂಡಲ್‌ಗಳಲ್ಲಿ ಮತ್ತೆ ಸಂಚಾರ ಆರಂಭಿಸಲಿರುವ ರೈಲುಗಳ ಪಟ್ಟಿಯನ್ನು ಘೋಷಿಸಿವೆ.