alex Certify BIG NEWS: ಭಾರತೀಯರ ಆರ್ಥಿಕ ಪರಿಸ್ಥಿತಿ ಕುರಿತು ಕುತೂಹಲಕರ ಮಾಹಿತಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತೀಯರ ಆರ್ಥಿಕ ಪರಿಸ್ಥಿತಿ ಕುರಿತು ಕುತೂಹಲಕರ ಮಾಹಿತಿ ಬಹಿರಂಗ

ಭಾರತ ಅತ್ಯಂತ ಶ್ರೀಮಂತ ರಾಷ್ಟ್ರವೇನಲ್ಲ. ಇಲ್ಲಿ ಬಡ ಮತ್ತು ಮಧ್ಯಮವರ್ಗದವರೇ ಹೆಚ್ಚಿದ್ದಾರೆ. ಭಾರತದ ಸುಮಾರು 69 ಪ್ರತಿಶತ ಕುಟುಂಬಗಳು ಆರ್ಥಿಕ ಅಭದ್ರತೆ ಮತ್ತು ದುರ್ಬಲತೆಯೊಂದಿಗೆ ಹೋರಾಡುತ್ತಿವೆ. ಈ ಕುಟುಂಬಗಳ ಸರಾಸರಿ ಆದಾಯವು ತಿಂಗಳಿಗೆ 23,000 ರೂಪಾಯಿ ಅನ್ನೋದು ಇತ್ತೀಚಿನ ಸಮೀಕ್ಷೆಯೊಂದರಲ್ಲಿ ಬಹಿರಂಗವಾಗಿದೆ.

Money9 ಈ ಕುರಿತಂತೆ ಸಮೀಕ್ಷೆ ನಡೆಸಿತ್ತು. ಭಾರತದಲ್ಲಿ ಗಳಿಕೆ  ಹೇಗೆ ? ಖರ್ಚು ಯಾವ ರೀತಿ ? ದೇಶದ ಪ್ರಪ್ರಥಮ ರಾಜ್ಯ ಶ್ರೇಣಿಯ ನಾಗರಿಕ ಆರ್ಥಿಕ ಭದ್ರತೆಯಲ್ಲಿ ಹೇಗೆ ಉಳಿತಾಯ ಮಾಡುತ್ತದೆ ಎಂಬುದರ ಕುರಿತು ಒಳನೋಟಗಳನ್ನು ಈ ಸಮೀಕ್ಷೆ ಒದಗಿಸಿದೆ.

ಇಲ್ಲಿನ ಕುಟುಂಬಗಳ ಆದಾಯ, ಉಳಿತಾಯ, ಹೂಡಿಕೆ ಮತ್ತು ಖರ್ಚುಗಳನ್ನು ಭಾರತದ ಪರ್ಸನಲ್ ಫೈನಾನ್ಸ್ ಪಲ್ಸ್ ಬಿಚ್ಚಿಟ್ಟಿದೆ. ಭಾರತೀಯ ಕುಟುಂಬದ ಸರಾಸರಿ ಆದಾಯವು ತಿಂಗಳಿಗೆ 23,000 ರೂಪಾಯಿ ಆಗಿದ್ದು, 46 ಪ್ರತಿಶತದಷ್ಟು ಭಾರತೀಯ ಕುಟುಂಬಗಳು ತಿಂಗಳಿಗೆ 15,000 ರೂಪಾಯಿಗಿಂತಲೂ ಕಡಿಮೆ ಆದಾಯವನ್ನು ಹೊಂದಿವೆ. ಅಂದರೆ ದೇಶದಲ್ಲಿ ಮಹತ್ವಾಕಾಂಕ್ಷಿ ಅಥವಾ ಕಡಿಮೆ ಆದಾಯದ ಸಮೂಹಕ್ಕೆ ಸೇರಿದವರೇ ಹೆಚ್ಚಿದ್ದಾರೆ. ಭಾರತೀಯ ಕುಟುಂಬಗಳಲ್ಲಿ ಕೇವಲ ಶೇ.3ರಷ್ಟು ಜನರು ಐಷಾರಾಮಿ ಜೀವನ ಮಟ್ಟವನ್ನು ಹೊಂದಿದ್ದಾರೆ.

ಈ ಪೈಕಿ ಹೆಚ್ಚಿನವರು ಅಧಿಕ ಆದಾಯದ ಸಮೂಹಗಳಿಗೆ ಅಂದರೆ ಉನ್ನತ-ಮಧ್ಯಮ ಮತ್ತು ಶ್ರೀಮಂತ ವರ್ಗಕ್ಕೆ ಸೇರಿದ್ದಾರೆ.   ಇದಲ್ಲದೆ 70 ಪ್ರತಿಶತ ಭಾರತೀಯ ಕುಟುಂಬಗಳು ಬ್ಯಾಂಕ್ ಠೇವಣಿ, ವಿಮೆ, ಅಂಚೆ ಕಚೇರಿ ಉಳಿತಾಯ ಮತ್ತು ಚಿನ್ನದ ರೂಪದಲ್ಲಿ ಕೆಲವು ಆರ್ಥಿಕ ಉಳಿತಾಯಗಳನ್ನು ಮಾಡುತ್ತವೆ ಎಂಬುದನ್ನು ಸಮೀಕ್ಷೆ ಪತ್ತೆ ಮಾಡಿದೆ. ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ನ ಉಳಿತಾಯ ಯೋಜನೆಗಳನ್ನು ಜನರು ಹೆಚ್ಚಾಗಿ ಬಳಸಿಕೊಳ್ತಿದ್ದಾರೆ.

ಜೀವ ವಿಮೆ ಮತ್ತು ಚಿನ್ನ ನಂತರದ ಸ್ಥಾನದಲ್ಲಿವೆ. ಶೇ.64 ರಷ್ಟು ಉಳಿತಾಯವು ಬ್ಯಾಂಕ್ ಖಾತೆಗಳಲ್ಲಿದೆ. 19 ಪ್ರತಿಶತದಷ್ಟು ಕುಟುಂಬಗಳು ಮಾತ್ರ ವಿಮೆಯನ್ನು ಹೊಂದಿವೆ. ಒಂದೇ ವರ್ಗದಲ್ಲಿರುವ ಭಾರತೀಯ ಕುಟುಂಬಗಳಲ್ಲಿ ಐದನೇ ಎರಡು ಭಾಗದಷ್ಟು ಜನರು ಯಾವುದೇ ಹಣಕಾಸಿನ ಉಳಿತಾಯವನ್ನು ಮಾಡಲು ಸಾಧ್ಯವಾಗುತ್ತಿಲ್ಲ ಅನ್ನೋದು ಸಮೀಕ್ಷೆಯಲ್ಲಿ ದೃಢಪಟ್ಟಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...