ಮೆಟಾ ಒಡೆತನದ ವಾಟ್ಸಾಪ್ ಶೀಘ್ರದಲ್ಲೇ ತನ್ನ ಪೇಮೆಂಟ್ ಸರ್ವೀಸ್ ಅನ್ನು 100 ಮಿಲಿಯನ್ ಬಳಕೆದಾರರಿಗೆ ವಿಸ್ತರಿಸಲಿದೆ. ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್, ಹೆಚ್ಚುವರಿ 60 ಮಿಲಿಯನ್ ಬಳಕೆದಾರರಿಗೆ UPI ಸೇವೆಯನ್ನು ವಿಸ್ತರಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದಿಂದ (NPCI) ಅನುಮೋದನೆ ಪಡೆದುಕೊಂಡಿದೆ.
ಹಾಗಾಗಿ ಇನ್ಮೇಲೆ 100 ಮಿಲಿಯನ್ ಬಳಕೆದಾರರು ವಾಟ್ಸಾಪ್ ವೇದಿಕೆಯಲ್ಲಿ ಯುಪಿಐ ಪೇಮೆಂಟ್ ಮಾಡಬಹುದಾಗಿದೆ. ಬಳಕೆದಾರರ ಸಂಖ್ಯೆಯ ಮೇಲಿನ ಮಿತಿಯನ್ನು ತೆಗೆದುಹಾಕುವುದು ವಾಟ್ಸಾಪ್‌ನ ಪ್ರಯತ್ನ. NPCI ಕ್ರಮೇಣವಾಗಿ ವಾಟ್ಸಾಪ್ ಮೇಲಿನ ಮಿತಿಯನ್ನು ಕಡಿಮೆ ಮಾಡ್ತಾ ಇದೆ. 2020ರಲ್ಲಿ ವಾಟ್ಸಾಪ್ ಪೇಮೆಂಟ್ ಆಪ್ಷನ್‌ಗೆ ಒಪ್ಪಿಗೆ ಸಿಕ್ಕಿತ್ತು.
2021ರ ನವೆಂಬರ್‌ನಲ್ಲಿ ವಾಟ್ಸಾಪ್ ತನ್ನ ನೋಂದಾಯಿತ ಬಳಕೆದಾರರ ಸಂಖ್ಯೆಯನ್ನು 20 ಮಿಲಿಯನ್‌ನಿಂದ 40 ಮಿಲಿಯನ್‌ಗೆ ವಿಸ್ತರಿಸಲು ಅನುಮತಿ ಪಡೆದುಕೊಂಡಿತ್ತು. ಈಗ 40 ರಿಂದ 100 ಮಿಲಿಯನ್‌ಗೆ ಯುಪಿಐ ಬಳಕೆದಾರರ ಸಂಖ್ಯೆ ಏರಿಕೆ ಆಗಿದೆ. ವಾಟ್ಸಾಪ್ ಭಾರತದಲ್ಲಿನ ತನ್ನ ಎಲ್ಲಾ ಬಳಕೆದಾರರಿಗೆ ಯುಪಿಐ ಪಾವತಿಗೆ ಅನುಮತಿ ನೀಡುವಂತೆ ಕೋರಿತ್ತು. ಆದ್ರೆ ಎನ್‌ಪಿಸಿಐನಿಂದ 100 ಮಿಲಿಯನ್ ಬಳಕೆದಾರರಿಗೆ ಮಾತ್ರ ಅನುಮತಿ ದೊರೆತಿದೆ.
ಭಾರತದಲ್ಲಿ 500 ಮಿಲಿಯನ್‌ಗಿಂತಲೂ ಹೆಚ್ಚು ವಾಟ್ಸಾಪ್ ಬಳಕೆದಾರರಿದ್ದಾರೆ. ಏತನ್ಮಧ್ಯೆ, ವಾಟ್ಸಾಪ್ ಈಗ ತನ್ನ ಅಪ್ಲಿಕೇಶನ್‌ನಲ್ಲಿ ಮೀಸಲಾದ ಸಮುದಾಯಗಳ ಟ್ಯಾಬ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದಲ್ಲದೆ, ನಿಮ್ಮ ಮತ್ತಷ್ಟು ಹೊಸ ಫೀಚರ್‌ಗಳನ್ನು ಕೂಡ ವಾಟ್ಸಾಪ್ ಪರಿಚಯಿಸ್ತಾ ಇದೆ.
ನಿಮ್ಮ ಫೋನ್‌ಬುಕ್‌ನಲ್ಲಿ ಯಾರ ಸಂಖ್ಯೆ ಸೇವ್ ಆಗಿಲ್ಲವೋ ಅಂಥವರಿಗೆ ಕೂಡ ನೀವು ವಾಟ್ಸಾಪ್ ಮೆಸೇಜ್ ಕಳಿಸಬಹುದು. ಈ ಮೊದಲು ವಾಟ್ಸಾಪ್, ವಾಯ್ಸ್ ನೋಟ್ಸ್‌ಗಾಗಿ ಹೊಸ ಟೂಲ್‌ಗಳನ್ನು ಪರಿಚಯಿಸಿತ್ತು. ಚಾಟ್ ಓಪನ್ ಮಾಡದೇ ವಾಯ್ಸ್ ಮೆಸೇಜ್ ಕೇಳಿಸಿಕೊಳ್ಳುವ ಸೌಲಭ್ಯ ಇದರಲ್ಲಿದೆ.