alex Certify BIG NEWS: ಭಾರತದ ಸರ್ಜಿಕಲ್‌ ದಾಳಿಗೆ ಪ್ರತೀಕಾರವಾಗಿ ಅಣ್ವಸ್ತ್ರ ಸಿದ್ಧಪಡಿಸಿತ್ತು ಪಾಕಿಸ್ತಾನ; ಮಾಜಿ ಅಧಿಕಾರಿ ಬರೆದ ಪುಸ್ತಕದಲ್ಲಿದೆ ಆಘಾತಕಾರಿ ಸಂಗತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತದ ಸರ್ಜಿಕಲ್‌ ದಾಳಿಗೆ ಪ್ರತೀಕಾರವಾಗಿ ಅಣ್ವಸ್ತ್ರ ಸಿದ್ಧಪಡಿಸಿತ್ತು ಪಾಕಿಸ್ತಾನ; ಮಾಜಿ ಅಧಿಕಾರಿ ಬರೆದ ಪುಸ್ತಕದಲ್ಲಿದೆ ಆಘಾತಕಾರಿ ಸಂಗತಿ….!

ನೆರೆರಾಷ್ಟ್ರ ಪಾಕಿಸ್ತಾನ, ಭಾರತದ ಮೇಲೆ ಪರಮಾಣು ದಾಳಿ ನಡೆಸಲು ತಂತ್ರ ಹೆಣೆದಿತ್ತು ಎಂಬ ಆಘಾತಕಾರಿ ಅಂಶ ಬಯಲಾಗಿದೆ. 2019ರ ಫೆಬ್ರವರಿಯಲ್ಲಿ ಬಾಲಾಕೋಟ್ ಸರ್ಜಿಕಲ್ ಸ್ಟ್ರೈಕ್ ನಂತರ ಪಾಕಿಸ್ತಾನ ಪರಮಾಣು ದಾಳಿಗೆ ಸಜ್ಜಾಗುತ್ತಿದೆ ಎಂದು ಆಗಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮಗೆ ತಿಳಿಸಿದ್ದರು ಎಂದು ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪೆಯೊ ಹೇಳಿದ್ದಾರೆ. ಪೊಂಪೆಯೊ ಬರೆದಿರುವ ‘ನೆವರ್ ಗಿವ್ ಆನ್ ಇಂಚ್: ಫೈಟಿಂಗ್ ಫಾರ್ ಅಮೇರಿಕಾ ಐ ಲವ್’ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ.

ಪೊಂಪೆಯೊ ಪ್ರಕಾರ 2019ರ ಫೆಬ್ರವರಿ 27-28 ರಂದು ನಡೆದ ಬೆಳವಣಿಗೆ ಇದು. ಅವರು ಅಮೆರಿಕ-ಉತ್ತರ ಕೊರಿಯಾ ಶೃಂಗಸಭೆಗಾಗಿ ಹನೋಯಿಯಲ್ಲಿದ್ದಾಗ ಈ ವಿಚಾರ ಬೆಳಕಿಗೆ ಬಂದಿತ್ತು. ಈ ಬಿಕ್ಕಟ್ಟನ್ನು ಶಮನಗೊಳಿಸಲು ರಾತ್ರಿಯಿಡೀ ನವದೆಹಲಿ ಮತ್ತು ಇಸ್ಲಾಮಾಬಾದ್ ಎರಡೂ ಕಡೆಗಳಲ್ಲಿ ಕಸರತ್ತು ನಡೆದಿದ್ದವು. “ಫೆಬ್ರವರಿ 2019 ರಲ್ಲಿ ಭಾರತ-ಪಾಕಿಸ್ತಾನದ ಪೈಪೋಟಿಯು ಪರಮಾಣು ದಹನಕ್ಕೆ ಬಹಳಷ್ಟು ಹತ್ತಿರವಾಗಿತ್ತು ಎಂಬುದು ಜಗತ್ತಿಗೆ ತಿಳಿದಿಲ್ಲ, ಸತ್ಯವೆಂದರೆ ಉತ್ತರ ನನಗೂ  ನಿಖರವಾಗಿ ಗೊತ್ತಿಲ್ಲ. ಆದರೆ ಅದು ತುಂಬಾ ಹತ್ತಿರದಲ್ಲಿದೆ ಎಂದು ನನಗೆ ತಿಳಿದಿತ್ತು” ಅಂತಾ ಪೊಂಪೆಯೊ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

2019ರ ಫೆಬ್ರವರಿಯಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪದಕರು ಪುಲ್ವಾಮಾದಲ್ಲಿ ದಾಳಿ ನಡೆಸದ್ದ ಕಾರಣ ಭಾರತದ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಯುದ್ಧ ವಿಮಾನಗಳು ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ತರಬೇತಿ ಕೇಂದ್ರವನ್ನು ಧ್ವಂಸಗೊಳಿಸಿದ್ದವು. ಈ ಸರ್ಜಿಕಲ್‌ ಸ್ಟ್ರೈಕ್‌ ಬಳಿಕ ಭಾರತದ ಮೇಲೆ ಅಣ್ವಸ್ತ್ರ ಪ್ರಯೋಗಿಸಲು ಪಾಕಿಗಳು ಹೊಂಚು ಹಾಕಿದ್ದರು.

ಪೊಂಪಿಯೊ ಪುಸ್ತಕದಲ್ಲಿ ಏನಿದೆ ? “ನಾನು ವಿಯೆಟ್ನಾಂನ ಹನೋಯ್‌ನಲ್ಲಿದ್ದೆ, ಆ ರಾತ್ರಿಯನ್ನು ನಾನು ಎಂದಿಗೂ ಮರೆಯುವುದಿಲ್ಲ. ಉತ್ತರ ಕೊರಿಯನ್ನರೊಂದಿಗೆ ಪರಮಾಣು ಶಸ್ತ್ರಾಸ್ತ್ರಗಳ ಕುರಿತು ಮಾತುಕತೆ ನಡೆಸುವುದು ಸಾಲದು ಎಂಬಂತೆ ಕಾಶ್ಮೀರದ ದಶಕಗಳ ಕಾಲದ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಬೆದರಿಕೆ ಹಾಕಲು ಪ್ರಾರಂಭಿಸಿದವು. ಹನೋಯ್‌ನಲ್ಲಿ ನನ್ನ ಭಾರತೀಯ ಸಹವರ್ತಿಯೊಂದಿಗೆ ಮಾತನಾಡಲು ನಾನು ಎಚ್ಚರಗೊಂಡೆ. ಪಾಕಿಸ್ತಾನಿಗಳು ತಮ್ಮ ಪರಮಾಣು ಶಸ್ತ್ರಾಸ್ತ್ರಗಳನ್ನು ದಾಳಿಗೆ ಸಿದ್ಧಪಡಿಸುತ್ತಿದ್ದಾರೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದರು. ಈ ಬಿಕ್ಕಟ್ಟನ್ನು ಬಗೆಹರಿಸಲು ನಾನು ಸಮಯ ಕೇಳಿದ್ದೆ. ನಾನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಅವರನ್ನು ಸಂಪರ್ಕಿಸಿದೆ. ಅನೇಕ ಬಾರಿ ಮಾತುಕತೆ ನಡೆಸಿದೆ. ಆದರೆ ಪರಮಾಣು ದಾಳಿ ವಿಚಾರ ನಿಜವಲ್ಲ ಎಂದೇ ಆತ ಹೇಳಿದರು. ಭಾರತವೇ ಪರಮಾಣು ದಾಳಿಗೆ ಸಜ್ಜಾಗುತ್ತಿದೆ ಎಂದು ಅವರು ನಂಬಿದ್ದರು. ಎರಡೂ ದೇಶಗಳಿಗೆ ಈ ಬಗ್ಗೆ ಪರಸ್ಪರ ನಂಬಿಕೆ ಮೂಡಿಸಲು ನಾವು ಸಾಕಷ್ಟು ಶ್ರಮಪಡಬೇಕಾಯಿತುʼʼ ಎಂದು ಪಾಂಪಿಯೊ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ.

ಪೊಂಪಿಯೊ ಅವರ ಹೇಳಿಕೆಗಳಿಗೆ ಭಾರತದ ವಿದೇಶಾಂಗ ಸಚಿವಾಲಯ ಇನ್ನೂ ಪ್ರತಿಕ್ರಿಯಿಸಿಲ್ಲ. “ಭಯಾನಕ ಫಲಿತಾಂಶವನ್ನು ತಪ್ಪಿಸಲು ಆ ರಾತ್ರಿ ನಾವು ಮಾಡಿದ್ದನ್ನು ಬೇರೆ ಯಾವುದೇ ರಾಷ್ಟ್ರ ಮಾಡಲಾರದು. ಎಲ್ಲಾ ರಾಜತಾಂತ್ರಿಕತೆಯಂತೆ, ಸಮಸ್ಯೆಯ ಮೇಲೆ ಕೆಲಸ ಮಾಡುವ ಜನರು ಬಹಳ ಮುಖ್ಯ, ಕನಿಷ್ಠ ಅಲ್ಪಾವಧಿಯಲ್ಲಿ ನಾನು ಉತ್ತಮ ತಂಡದ ಸದಸ್ಯರನ್ನು ಹೊಂದಲು ಅದೃಷ್ಟಶಾಲಿಯಾಗಿದ್ದೆ. ಭಾರತದಲ್ಲಿ ಕೆನ್ ಜಸ್ಟರ್ ಸಮರ್ಥ ರಾಯಭಾರಿ. ಅಲ್ಲಿನ ಜನರನ್ನು ಅವರು ಪ್ರೀತಿಸುತ್ತಾರೆ ” ಎಂದು ಅವರು ಉಲ್ಲೇಖಿಸಿದ್ದಾರೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...