
ಭಾರತದ ಒತ್ತಡಕ್ಕೆ ಕೊನೆಗೂ ಯುನೈಟೆಡ್ ಕಿಂಗ್ ಡಂ ಮಣಿದಿದೆ. ಕೋವಿಶೀಲ್ಡ್ ಲಸಿಕೆ ಪಡೆದವರ ದೇಶ ಎಂಟ್ರಿಗೆ ಗ್ರೀನ್ ಸಿಗ್ನಲ್ ನೀಡಿದೆ. ಈ ಮೊದಲು ಎರಡು ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದಿದ್ದರೂ ಸಹ ಅಂತಹ ಪ್ರಯಾಣಿಕರು ಬಂದ ವೇಳೆ ವಿವಿಧ ಪರೀಕ್ಷೆಗಳಿಗೆ ಒಳಗಾಗುವುದನ್ನು ಯುಕೆ ಕಡ್ಡಾಯಗೊಳಿಸಿತ್ತು.
ಆದರೆ ಇತರೆ ದೇಶಗಳಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಅಂತಹ ಯಾವುದೇ ನಿಯಮ ವಿಧಿಸಿರಲಿಲ್ಲ. ಇದು ಭಾರತದ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ತಕ್ಕ ಪ್ರತ್ಯುತ್ತರ ನೀಡುವುದಾಗಿ ಎಚ್ಚರಿಕೆ ನೀಡಿದ್ದರು.
ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಯುಕೆ ಸರ್ಕಾರ ತನ್ನ ಪ್ರಯಾಣದ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಿದೆ. ಭಾರತದಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದವರ ಪ್ರಯಾಣಕ್ಕೆ ಈಗ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೆ ಭಾರತದಿಂದ ಆಗಮಿಸುವವರು 10 ದಿನಗಳ ಕಾಲ ಕ್ವಾರಂಟೈನ್ ನಲ್ಲಿರಬೇಕೆಂದು ತಿಳಿಸಿದ್ದು, ಇದಕ್ಕೆ ಭಾರತ ಪ್ರತಿಭಟನೆ ದಾಖಲಿಸುವ ಸಾಧ್ಯತೆಯಿದೆ.