alex Certify BIG NEWS:‌ ಭಾರತದ ಅಳಿಯನಾದ್ರೂ ಜಿ20ಯಲ್ಲಿ ರಿಷಿ ಸುನಕ್‌ಗೆ ಸೂಕ್ತ ಗೌರವ ಸಿಕ್ಕಿಲ್ಲ; ಬ್ರಿಟನ್‌ ಮಾಧ್ಯಮಗಳ ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS:‌ ಭಾರತದ ಅಳಿಯನಾದ್ರೂ ಜಿ20ಯಲ್ಲಿ ರಿಷಿ ಸುನಕ್‌ಗೆ ಸೂಕ್ತ ಗೌರವ ಸಿಕ್ಕಿಲ್ಲ; ಬ್ರಿಟನ್‌ ಮಾಧ್ಯಮಗಳ ಆರೋಪ

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ದೆಹಲಿಯಲ್ಲಿ ನಡೆದ ಜಿ20 ಶೃಂಗಸಂಭೆಯಲ್ಲಿ ಹೆಚ್ಚಿನ ಮಹತ್ವ ಸಿಕ್ಕಿಲ್ಲ ಅಂತಾ ಬ್ರಿಟನ್ ಮಾಧ್ಯಮಗಳು ಆರೋಪ ಮಾಡಿವೆ. ದಿ ಗಾರ್ಡಿಯನ್ ಪತ್ರಿಕೆಯಲ್ಲಿ ಈ ಬಗ್ಗೆ ಲೇಖನವೇ ಪ್ರಕಟವಾಗಿದೆ. ರಿಷಿ ಸುನಕ್ ಭಾರತದ ಅಳಿಯನಾದ್ರೂ ಅವರಿಗೆ ಹೆಚ್ಚಿನ ಗೌರವ ನೀಡಿಲ್ಲ ಅನ್ನೋದು ಮಾಧ್ಯಮಗಳ ಆರೋಪ. ಆದರೆ ಜಿ20 ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ಮೋದಿ ಅವರೊಂದಿಗಿನ ಭೇಟಿ ಅತ್ಯಂತ ಫಲಪ್ರದವಾಗಿತ್ತು ಎಂದು ರಿಷಿ ಸುನಕ್ ಬಣ್ಣಿಸಿದ್ದಾರೆ.

ಆದಾಗ್ಯೂ ದಿ ಗಾರ್ಡಿಯನ್‌ ಪತ್ರಿಕೆಯಲ್ಲಿ ಶೃಂಗಸಭೆ ನಿಮಿತ್ತ ದೆಹಲಿಯಲ್ಲಿ ವಿಧಿಸಲಾಗಿದ್ದ ಕೆಲವು ಮಿತಿಗಳ ಬಗ್ಗೆ ಕೂಡ ಆಕ್ಷೇಪ ವ್ಯಕ್ತವಾಗಿದೆ. ರಿಷಿ ಸುನಕ್ ಅವರ ಕಾರ್ಯಕ್ರಮಗಳಲ್ಲಿನ ಬದಲಾವಣೆಗಳನ್ನು ಸಹ ಇಲ್ಲಿ ಉಲ್ಲೇಖಿಸಲಾಗಿದೆ. ಭಾರತದಲ್ಲಿ ರಿಷಿ ಸುನಕ್ ಅವರಿಗೆ ನಿರೀಕ್ಷಿತ ರೀತಿಯಲ್ಲಿ ಗೌರವ ಹಾಗೂ ಗಮನ ನೀಡಲಾಗಿಲ್ಲ. ರಿಷಿ ಸುನಕ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುವುದು ಎಂದು ಬ್ರಿಟಿಷ್ ಪಿಎಂಒ ನಿರೀಕ್ಷಿಸಿತ್ತು. ಆದರೆ ರಿಷಿ ಸುನಕ್‌ ಅವರ ಸ್ವಾಗತ ನೀರಸವಾಗಿತ್ತು ಎಂದು ಆರೋಪಿಸಲಾಗಿದೆ.

ಆರ್ಥಿಕತೆಯ ವಿಷಯದಲ್ಲಿ ಭಾರತ ಐದನೇ ಸ್ಥಾನದಲ್ಲಿದೆ ಮತ್ತು ಬ್ರಿಟನ್ ಆರನೇ ಸ್ಥಾನದಲ್ಲಿದೆ. ಮೊದಲಿಗೆ ರಿಷಿ ಸುನಕ್ ಅವರು ಪ್ರಧಾನಿ ಮೋದಿ ಅವರನ್ನು ಅವರದ್ದೇ ನಿವಾಸದಲ್ಲಿ  ಭೇಟಿಯಾಗಬೇಕಿತ್ತು. ಆದರೆ ಸುನಕ್ ಅವರನ್ನು ಆದ್ಯತೆಯ ಪಟ್ಟಿಯಲ್ಲಿ ಕೈಬಿಡಲಾಗಿದೆ ಮತ್ತು ಪಿಎಂ ಮೋದಿ ಅವರ ಮನೆಯಲ್ಲಿ ನಡೆದ ಸಭೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಮೀಸಲಿಡಲಾಗಿದೆ ಎಂಬುದು ಆರೋಪ. ಸುನಕ್ ಮತ್ತು ಪಿಎಂ ಮೋದಿ ಜಿ 20 ಶೃಂಗಸಭೆಯ ಕಾನ್ಫರೆನ್ಸ್ ಕೊಠಡಿಯಲ್ಲಿ ಭೇಟಿಯಾದರು.

ಇದೆಲ್ಲದರ ಹೊರತಾಗಿಯೂ ರಿಷಿ ಸುನಕ್ ಅವರು ಪ್ರಧಾನಿ ಮೋದಿ ಅವರೊಂದಿಗಿನ ಸಂಭಾಷಣೆಯನ್ನು ಅತ್ಯಂತ ಉತ್ಪಾದಕ ಮತ್ತು ಅದ್ಭುತ ಎಂದು ಬಣ್ಣಿಸಿದ್ದಾರೆ. ಇದಲ್ಲದೇ ವ್ಯಾಪಾರ ಒಪ್ಪಂದಕ್ಕೂ ಮುದ್ರೆ ಬೀಳಬಹುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ರಿಷಿ ಸುನಕ್ ಅವರೊಂದಿಗಿನ ಸಭೆಯನ್ನು ಪಿಎಂ ಮೋದಿ ರದ್ದುಗೊಳಿಸಿದ್ದು ಮಾತ್ರವಲ್ಲದೆ ವ್ಯಾಪಾರ ಕಾರ್ಯನಿರ್ವಾಹಕರ ನಿಯೋಗವು ಈಗಾಗಲೇ ನಿಗದಿತ ಕಾರ್ಯಕ್ರಮವನ್ನು ರದ್ದುಗೊಳಿಸಿದೆ ಎಂದು ಬ್ರಿಟಿಷ್ ಮಾಧ್ಯಮಗಳು ತಿಳಿಸಿವೆ.

ಪತ್ರಿಕೆಯ ಪ್ರಕಾರ, ದೆಹಲಿಯ ವಿವಿಧ ಸ್ಥಳಗಳಲ್ಲಿ ವಿಧಿಸಲಾದ ನಿರ್ಬಂಧಗಳಿಂದ ಇದು ಸಂಭವಿಸಿದೆ. ಇದರಿಂದಾಗಿ ಜನರು ಸಭೆ ನಡೆಯುವ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ. ನಿರ್ಬಂಧಗಳ ಕಾರಣ ಬ್ರಿಟಿಷ್ ಪ್ರಧಾನಿ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರು ತಮ್ಮ ನೆಚ್ಚಿನ ರೆಸ್ಟೋರೆಂಟ್‌ಗೆ ಹೋಗಲು ಕೂಡ ಸಾಧ್ಯವಾಗಲಿಲ್ಲ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಬೇರೊಂದು ಹೋಟೆಲ್‌ನಲ್ಲಿ ಅವರು ಊಟ ಸೇವಿಸಿದ್ದಾರಂತೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...