alex Certify BIG NEWS: ಭಾರತದಲ್ಲಿ ಮತ್ತೆ ಓಮಿಕ್ರಾನ್‌ ಆತಂಕ, 10 ರಾಜ್ಯಗಳಲ್ಲಿ ಪತ್ತೆಯಾಗಿದೆ ಉಪ ರೂಪಾಂತರಿ ವೈರಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತದಲ್ಲಿ ಮತ್ತೆ ಓಮಿಕ್ರಾನ್‌ ಆತಂಕ, 10 ರಾಜ್ಯಗಳಲ್ಲಿ ಪತ್ತೆಯಾಗಿದೆ ಉಪ ರೂಪಾಂತರಿ ವೈರಸ್‌

ಭಾರತದಲ್ಲಿ ಮತ್ತೆ ಓಮಿಕ್ರಾನ್‌ ಭೀತಿ ಹೆಚ್ಚಿದೆ. ಸುಮಾರು 10 ರಾಜ್ಯಗಳಲ್ಲಿ ಓಮಿಕ್ರಾನ್ ಹೊಸ ರೂಪಾಂತರಿ ಪತ್ತೆಯಾಗಿದೆ. BA.2.75 ಎಂದು ಕರೆಯಲ್ಪಡುವ ಈ ಸಬ್‌ವೇರಿಯಂಟ್ ಅತ್ಯಂತ ಆತಂಕಕಾರಿ ಆಗಿರಬಹುದು ಎಂದು ಇಸ್ರೇಲಿ ತಜ್ಞರು ಹೇಳಿದ್ದಾರೆ.

ರೂಪಾಂತರಿ ವೈರಸ್‌ ಪತ್ತೆಯಾಗಿರೋದನ್ನು ಭಾರತೀಯ ಆರೋಗ್ಯ ಸಚಿವಾಲಯ ಇನ್ನೂ ದೃಢಪಡಿಸಿಲ್ಲ. ಮುಖ್ಯವಾಗಿ ಭಾರತದ 10 ರಾಜ್ಯಗಳು ಮತ್ತು ಏಳು ದೇಶಗಳಿಂದ ಈವರೆಗೆ BA.2.75ನ 85 ಅನುಕ್ರಮಗಳನ್ನು ಪಡೆಯಲಾಗಿದೆ ಅಂತಾ ಸೆಂಟ್ರಲ್‌ ವೈರಾಲಜಿ ಲ್ಯಾಬೋರೇಟರಿಯ ಡಾ ಶೇ ಫ್ಲೆಶನ್ ಟ್ವೀಟ್‌ ಮಾಡಿದ್ದಾರೆ. ಭಾರತದ ಹೊರಗೆ ಈ ವೈರಸ್‌ ಪ್ರಸರಣವನ್ನೂ ಇನ್ನೂ ಪತ್ತೆ ಮಾಡಲು ಸಾಧ್ಯವಾಗಿಲ್ಲ ಎಂದವರು ತಿಳಿಸಿದ್ದಾರೆ.

ರಾಜಧಾನಿ ದೆಹಲಿಯಲ್ಲಿ ಹೊಸ ರೂಪಾಂತರಿಯ ಒಂದು ಕೇಸ್‌ ಪತ್ತೆಯಾಗಿದೆ. ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಕೂಡ ಸೋಂಕು ಕಾಣಿಸಿಕೊಂಡಿದೆ. ಜಪಾನ್, ಜರ್ಮನಿ, ಯುಕೆ, ಕೆನಡಾ, ಅಮೆರಿಕ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಲ್ಲೂ ಈ ಹೊಸ ರೂಪಾಂತರಿ ವೈರಸ್‌ ಕಂಡು ಬಂದಿದೆ.

ವೈರಸ್‌ನ ಪ್ರಾಬಲ್ಯ ಹೇಗಿರುತ್ತದೆ ಎಂಬ ಬಗ್ಗೆ ತಜ್ಞರು ಇನ್ನೂ ಖಚಿತ ನಿರ್ಧಾರಕ್ಕೆ ಬಂದಿಲ್ಲ. ಆದಾಗ್ಯೂ ಈ ವೈರಸ್‌ ಆತಂಕಕಾರಿಯೇ ಇರಬಹುದು ಎನ್ನಲಾಗ್ತಾ ಇದೆ.  ಲಂಡನ್‌ನ ಇಂಪೀರಿಯಲ್ ಡಿಪಾರ್ಟ್‌ಮೆಂಟ್ ಆಫ್ ಇನ್ಫೆಕ್ಷಿಯಸ್ ಡಿಸೀಸ್‌ನ ವೈರಾಲಜಿಸ್ಟ್ ಟಾಮ್ ಪೀಕಾಕ್ ಪ್ರಕಾರ ಈ ಹೊಸ ರೂಪಾಂತರಿ ಬಗ್ಗೆ ಸೂಕ್ಷ್ಮ ಅವಲೋಕನ ಮಾಡುವುದು ಯೋಗ್ಯ. ವೇಗವಾಗಿ ಬೆಳೆಯುತ್ತಿರುವ ರೂಪಾಂತರಿ ವೈರಸ್‌ಗಳು ಭೌಗೋಳಿಕ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ವೈರಸ್‌ನ ಮೂಲ BA.2 ಗೆ ಹೋಲಿಸಿದರೆ ಇದು ಗಮನಾರ್ಹವಾದ ಪ್ರತಿಜನಕ ಬದಲಾವಣೆಯನ್ನು ಹೊಂದಿದೆ. ಪ್ರಯೋಗಾಲಯದ ಪ್ರಕಾರ, ಎರಡು ಪ್ರಮುಖ ರೂಪಾಂತರಗಳು G446S ಮತ್ತು R493Q.BA.2 ಅನ್ನು ಇನ್ನೂ ತಟಸ್ಥಗೊಳಿಸುವ ಪ್ರಸ್ತುತ ಲಸಿಕೆಗಳಿಂದ ಹೊರಹೊಮ್ಮುವ ಪ್ರತಿಕಾಯಗಳಿಂದ ತಪ್ಪಿಸಿಕೊಳ್ಳುವ ಅತ್ಯಂತ ಪ್ರಬಲವಾದ ಸೈಟ್‌ಗಳಲ್ಲಿ G446S ಒಂದಾಗಿದೆ. ಆರೋಗ್ಯ ತಜ್ಞರ ಪ್ರಕಾರ ಶೀಘ್ರದಲ್ಲೇ ಯುರೋಪ್ ಮತ್ತು ಅಮೆರಿಕದಲ್ಲಿ ಈ ರೂಪಾಂತರಿ ಗಂಭೀರ ಪರಿಣಾಮಗಳನ್ನು ಉಂಟು ಮಾಡಬಹುದು.

ಏಪ್ರಿಲ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವಿಜ್ಞಾನಿಗಳು ಮೊದಲು ಗುರುತಿಸಿದ ಈ ತಳಿಗಳು ಪ್ರಪಂಚದಾದ್ಯಂತ ಡಜನ್‌ಗಟ್ಟಲೆ ದೇಶಗಳಲ್ಲಿ ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಸಬ್‌ವೇರಿಯಂಟ್‌ಗಳು ಜಾಗತಿಕವಾಗಿ ಹೆಚ್ಚುತ್ತಿವೆ, ಇದಕ್ಕೆ ಕಾರಣ ಅವು ಇತರ ಪರಿಚಲನೆಯ ರೂಪಾಂತರಗಳಿಗಿಂತ ವೇಗವಾಗಿ ಹರಡುತ್ತವೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...