alex Certify BIG NEWS: ಭಾರತದಲ್ಲಿ ಕುಂದುತ್ತಿದೆ ಯುವ ಶಕ್ತಿ, ಯುವಜನತೆಯನ್ನು ಮೀರಿಸಲಿದೆ ವಯಸ್ಸಾದವರ ಸಂಖ್ಯೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತದಲ್ಲಿ ಕುಂದುತ್ತಿದೆ ಯುವ ಶಕ್ತಿ, ಯುವಜನತೆಯನ್ನು ಮೀರಿಸಲಿದೆ ವಯಸ್ಸಾದವರ ಸಂಖ್ಯೆ….!

ಯುವಜನತೆಯೇ ಭಾರತದ ಶಕ್ತಿ ಅನ್ನೋ ಮಾತಿತ್ತು. ಆದ್ರೀಗ ಪರಿಸ್ಥಿತಿ ಸಂಪೂರ್ಣ ಬದಲಾಗ್ತಾ ಇದೆ. 2021-2036ರ ಅವಧಿಯಲ್ಲಿ ವಯಸ್ಸಾದವರ ಸಂಖ್ಯೆ ಯುವಜನತೆಗಿಂತ ಹೆಚ್ಚಾಗುವ ಸಾಧ್ಯತೆ ಇದೆ. ಯುವಕ, ಯುವತಿಯರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ.

2021ರವರೆಗೆ ಯುವ ಜನಸಂಖ್ಯೆಯ ಅನುಪಾತದಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಏರಿಕೆ ದಾಖಲಾಗಿತ್ತು. ಆದ್ರೆ 2021ರ ನಂತರ ಈ ರಾಜ್ಯಗಳಲ್ಲೇ ಯುವ ಜನತೆಯ ಸಂಖ್ಯೆ ಇಳಿಮುಖವಾಗುವ ನಿರೀಕ್ಷೆಯಿದೆ. ಈ ಬಗ್ಗೆ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ‘ಯೂತ್ ಇನ್ ಇಂಡಿಯಾ 2022’ ಎಂಬ ವರದಿಯನ್ನು ಬಿಡುಗಡೆ ಮಾಡಿದೆ.

ಕೇರಳ, ತಮಿಳುನಾಡು ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳಲ್ಲಿ 2036ರ ವೇಳೆಗೆ ಯುವಕರಿಗಿಂತ ಹೆಚ್ಚು ವಯಸ್ಸಾದವರೇ ಇರಲಿದ್ದಾರೆ ಅನ್ನೋದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಆದ್ರೆ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ದೇಶದ ಒಟ್ಟಾರೆಯ ಯುವಜನತೆಯ ಪೈಕಿ ಶೇ.52ರಷ್ಟು ಜನಸಂಖ್ಯೆ ಇರಲಿದೆ.

2021ರಲ್ಲಿ ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ 15-29 ವರ್ಷ ವಯಸ್ಸಿನೊಳಗಿನವರ ಪ್ರಮಾಣ ಶೇ.27.2ರಷ್ಟಿತ್ತು. 2036 ರ ವೇಳೆಗೆ ಈ ಸಂಖ್ಯೆ ಶೇ.22.7ಕ್ಕೆ ಇಳಿಕೆಯಾಗುವ ನಿರೀಕ್ಷೆ ಇದೆ. 1991ರಲ್ಲಿ ಒಟ್ಟಾರೆ ಯುವ ಜನಸಂಖ್ಯೆ 222.7 ಮಿಲಿಯನ್‌ನಷ್ಟಿತ್ತು. ಇದು 2011 ರ ವೇಳೆಗೆ 333.4 ಮಿಲಿಯನ್‌ನಷ್ಟಾಗಿತ್ತು. 2021 ರಲ್ಲಿ 371.4 ಮಿಲಿಯನ್‌ ತಲುಪಿರಬಹುದು ಎಂಬ ಅಂದಾಜಿದೆ. ಆದ್ರೆ 2036 ರ ವೇಳೆಗೆ ಯುವ ಜನತೆಯ ಸಂಖ್ಯೆ 345.5 ಮಿಲಿಯನ್‌ಗೆ ಇಳಿಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಕೇರಳ ರಾಜ್ಯದಲ್ಲಿ ವಯಸ್ಕರಿಗಿಂತಲೂ ಯುವಜನತೆಯ ಸಂಖ್ಯೆಯೇ ಹೆಚ್ಚಾಗಿತ್ತು. ಆದ್ರೆ 2036 ರ ವೇಳೆಗೆ ಕೇರಳದಲ್ಲಿ ಸಹ ಯುವಜನಸಂಖ್ಯೆ ಶೇ.22.1ರಿಂದ ಶೇ.19.2ಕ್ಕೆ ಇಳಿಕೆಯಾಗುವ ಸಾಧ್ಯತೆ ಗೋಚರಿಸುತ್ತಿದೆ. ಹಾಗಾಗಿ ಆರೋಗ್ಯ ಕ್ಷೇತ್ರದತ್ತ ಸರ್ಕಾರ ಹೆಚ್ಚಿನ ಒತ್ತು ನೀಡುವುದು ಅನಿವಾರ್ಯ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...