ಆಪಲ್ ಕಂಪನಿಯ ಐಫೋನ್ ದುಬಾರಿ ಮೊಬೈಲ್ ಗಳಲ್ಲಿ ಮೊದಲ ಸ್ಥಾನದಲ್ಲಿದೆ. ಇದೀಗ ಐಫೋನ್ ಪ್ರಿಯರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ. ಭಾರತದಲ್ಲಿಯೇ ಐ ಫೋನ್ ಉತ್ಪಾದನೆ ಮಾಡಲು ಆಪಲ್ ನಿರ್ಧರಿಸಿದ್ದು, ಇದರಿಂದಾಗಿ ಒಂದಷ್ಟು ಕಡಿಮೆ ಬೆಲೆಗೆ ಭಾರತೀಯರಿಗೆ ಐಫೋನ್ ಸಿಗುವ ಸಾಧ್ಯತೆ ಇದೆ.
ಐಫೋನ್ 14 ಭಾರತದಲ್ಲಿಯೇ ತಯಾರಿಸುವುದಾಗಿ ಆಪಲ್ ತಿಳಿಸಿದ್ದು, ಈಗಾಗಲೇ ಚೀನಾದಲ್ಲಿ ತನ್ನ ಉತ್ಪಾದನಾ ಘಟಕವನ್ನು ಹೊಂದಿರುವ ಆಪಲ್, ಇದರ ಜೊತೆಗೆ ಭಾರತದಲ್ಲಿಯೂ ಉತ್ಪಾದನೆಗೆ ಮುಂದಾಗಿದೆ. ಏಷ್ಯಾದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸುವ ಸಲುವಾಗಿ ಐಫೋನ್ ಈ ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.
ಚೀನಾ ಮತ್ತು ಅಮೆರಿಕ ನಡುವೆ ಸಂಘರ್ಷ ಹೆಚ್ಚುತ್ತಿರುವುದು, ಇದರ ಮಧ್ಯೆ ಕೊರೊನಾ ಕಾರಣಕ್ಕೆ ಚೀನಾದಲ್ಲಿ ಕೆಲವೊಂದು ನಗರಗಳನ್ನು ಲಾಕ್ಡೌನ್ ಮಾಡುತ್ತಿರುವುದರಿಂದಲೂ ಭಾರತದಲ್ಲಿ ತನ್ನ ಐ ಫೋನ್ 14 ಉತ್ಪಾದನೆಗೆ ಆಪಲ್ ಕಂಪನಿ, ಮುಂದಾಗಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ.