alex Certify BIG NEWS: ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ ಭಾರೀ ಇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭವಿಷ್ಯ ನಿಧಿ ಠೇವಣಿಗಳ ಮೇಲಿನ ಬಡ್ಡಿ ದರದಲ್ಲಿ ಭಾರೀ ಇಳಿಕೆ

ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿರುವ ಠೇವಣಿಗಳು ಪ್ರಸಕ್ತ ಹಣಕಾಸು ವರ್ಷ 2021-22ರಲ್ಲಿ ಶೇಕಡಾ 8.1 ಬಡ್ಡಿ ದರವನ್ನು ಪಡೆಯಲಿದೆ ಎಂದು ಇಪಿಎಫ್​ಓ ಪ್ರಕಟಣೆ ನೀಡಿದೆ. ಅಸ್ಸಾಂನ ಗುವಾಹಟಿಯಲ್ಲಿ ನಡೆದ 230ನೇ ಇಪಿಎಫ್​ಒ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

40 ಬೇಸಿಸ್​ ಪಾಯಿಂಟ್​ಗಳ ಕಡಿತದೊಂದಿಗೆ ಈ ಹೊಸ ಬಡ್ಡಿ ದರವು ಕಳೆದ ನಾಲ್ಕು ದಶಕಗಳಲ್ಲಿಯೇ ಅತ್ಯಂತ ಕಡಿಮೆ ಬಡ್ಡಿ ದರವಾಗಿದೆ. ಈ ನಿರ್ಧಾರದಿಂದ ದೇಶದ ಸುಮಾರು 5 ಕೋಟಿ ಇಪಿಎಫ್​​ಓ ಚಂದಾದಾರರಿಗೆ ಹಿನ್ನಡೆಯಾದಂತಾಗಿದೆ. 1977-78ರಲ್ಲಿ ಇಪಿಎಫ್​​ಓ ಬಡ್ಡಿ ದರ ಶೇಕಡಾ 8ರಷ್ಟಿತ್ತು. ಇದಾದ ಬಳಿಕದ ಇದೇ ಮೊದಲ ಬಾರಿಗೆ ಪಿಎಫ್​ ಬಡ್ಡಿದರ ಇಷ್ಟು ಕನಿಷ್ಟ ಮಟ್ಟಕ್ಕೆ ಕುಸಿದಿದೆ.

ಕಳೆದ ಹಣಕಾಸು ವರ್ಷದಲ್ಲಿ ಬಡ್ಡಿ ದರವನ್ನು ಶೇ.8.5ರಲ್ಲೇ ಇರಿಸಲಾಗಿತ್ತು. ಇದನ್ನು ಮಾರ್ಚ್ 2021 ರಲ್ಲಿ ಕೇಂದ್ರೀಯ ಟ್ರಸ್ಟಿಗಳ ಮಂಡಳಿ (CBT) ನಿರ್ಧರಿಸಿದೆ.

ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಅಂತಿಮ ನಿರ್ಧಾರ ಕೈಗೊಳ್ಳುವ ಸಂಸ್ಥೆಯಾದ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು 2021-22ರಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿಗಳ ಮೇಲೆ ಶೇಕಡಾ 8.1 ಪ್ರತಿಶತ ಬಡ್ಡಿದರವನ್ನು ಒದಗಿಸಲು ಇಂದು ನಡೆದ ಸಭೆಯಲ್ಲಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...