ಬೆಂಗಳೂರು: ಹಾಸನ ಜೆಡಿಎಸ್ ಟಿಕೆಟ್ ಗಾಗಿ ಭವಾನಿ ರೇವಣ್ಣ ಫೈಟ್ ವಿಚಾರವಾಗಿ ಮಾತನಾಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಭವಾನಿ ಅಕ್ಕ ಬಿಜೆಪಿಗೆ ಬರಲಿ ಎಂದು ಆಹ್ವಾನಿಸಿದ್ದರು. ಇದೀಗ ಈ ವಿಚಾರವಾಗಿ ಉಲ್ಟಾ ಹೊಡೆದಿರುವ ಸಿ.ಟಿ ರವಿ ಅದನ್ನು ಗಂಭೀರವಾಗಿ ಪರಿಗಣಿಸುವುದು ಬೇಡ ಎಂದು ನುಣುಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಭಾವಾನಿ ರೇವಣ್ಣಗೆ ಬಿಜೆಪಿಗೆ ಆಹ್ವಾನ ಮಾಡಿದ್ದು ತಮಾಷೆಗೆ, ಅದನ್ನೇ ಗಂಭೀರವಾಗಿ ಪರಿಗಣಿಸಬಾರದು. ನೀವೇ ಹೇಳಿದ್ದು ಎಂದು ಬಿಜೆಪಿಗೆ ಬಂದು ಟಿಕೆಟ್ ಕೇಳಬೇಡಿ. ನನ್ನ ಬಗ್ಗೆ ಆಕ್ರೋಶದ ಭಾವನೆ ಬೇಡ ಎಂದು ಹೇಳಿದ್ದಾರೆ.
ಹಾಸನ ಕ್ಷೇತ್ರದಲ್ಲಿ ಪ್ರೀತಂ ಗೌಡ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಜನ ಪ್ರೀತಂ ಗೌಡ ಪರವಿದ್ದಾರೆ. ಜೆಡಿಎಸ್ ನಿಂದ ಯಾರೇ ಅಭ್ಯರ್ಥಿ ಕಣಕ್ಕಿಳಿಸಿದರೂ ಪ್ರೀತಂ ಗೌಡ ಗೆಲ್ಲುತ್ತಾರೆ. ಹೀಗಾಗಿ ಭವಾನಿ ಅಕ್ಕ ಅವರಿಗೆ ಹಾಸನ ಕ್ಷೇತ್ರ ಸುರಕ್ಷಿತ ಕ್ಷೇತ್ರವಲ್ಲ ಎಂದು ಹೇಳಿದರು.