alex Certify BIG NEWS: ‘ಭದ್ರತಾ ಲೋಪ’ ಪ್ರಕರಣದಲ್ಲಿ ಕೇಂದ್ರಕ್ಕೆ ಮಹತ್ವದ ಮಾಹಿತಿ ರವಾನಿಸಿದ ಪಂಜಾಬ್​ ಮುಖ್ಯ ಕಾರ್ಯದರ್ಶಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ‘ಭದ್ರತಾ ಲೋಪ’ ಪ್ರಕರಣದಲ್ಲಿ ಕೇಂದ್ರಕ್ಕೆ ಮಹತ್ವದ ಮಾಹಿತಿ ರವಾನಿಸಿದ ಪಂಜಾಬ್​ ಮುಖ್ಯ ಕಾರ್ಯದರ್ಶಿ

ಪಂಜಾಬ್​ನಲ್ಲಿ ಪ್ರಧಾನಿ ಮೋದಿ ಬೆಂಗಾವಲು ವಾಹನವನ್ನು ತಡೆದ ಪರಿಣಾಮ ಉಂಟಾದ ಭದ್ರತಾ ಲೋಪದ ಸಂಬಂಧ ನಡೆಯುತ್ತಿರುವ ತನಿಖೆಯ ಸಂಬಂಧ ಮಾಹಿತಿಯನ್ನು ನೀಡುವಂತಹ ಪತ್ರವನ್ನು ಕೇಂದ್ರ ಗೃಹ ಕಾರ್ಯದರ್ಶಿಗೆ ಪಂಜಾಬ್​ ಮುಖ್ಯ ಕಾರ್ಯದರ್ಶಿ ಕಳುಹಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖಾ ವಿವರವನ್ನು ಮೂರು ದಿನಗಳಲ್ಲಿ ಸಲ್ಲಿಸುವುದಾಗಿ ಪಂಜಾಬ್​ ಮುಖ್ಯ ಕಾರ್ಯದರ್ಶಿ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ. ರೈತರ ಪ್ರತಿಭಟನೆಯಿಂದಾಗಿ ಫ್ಲೈಓವರ್​ನಲ್ಲಿ ಪ್ರಧಾನಿ ಮೋದಿ ಅವರಿದ್ದ ಕಾರು ಬರೋಬ್ಬರಿ 20 ನಿಮಿಷಗಳ ಕಾಲ ನಿಂತಿತ್ತು .

ಪಂಜಾಬ್​ ಮುಖ್ಯ ಕಾರ್ಯದರ್ಶಿ ಅನಿರುದ್ಧ ತಿವಾರಿ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್​ ಕುಮಾರ್​ ಭಲ್ಲಾರಿಗೆ ಘಟನೆ ಸಂಬಂಧ ಪೊಲೀಸ್​ ಪ್ರಕರಣ ದಾಖಲಿಸಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ತನಿಖೆಗಾಗಿ ಇಬ್ಬರು ಸದಸ್ಯರ ಸಮಿತಿ ರಚನೆಯಾಗಿದ್ದು, ಇದರಲ್ಲಿ ನಿವೃತ್ತ ನ್ಯಾಯಮೂರ್ತಿ ಮೆಹ್ತಾಬ್​ ಗಿಲ್​ ಹಾಗೂ ಪಂಜಾಬ್​ ಗೃಹ ವ್ಯವಹಾರಗಳ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನುರಾಗ್​ ವರ್ಮಾ ಇರಲಿದ್ದಾರೆ. ಇವರು ಮೂರು ದಿನಗಳಲ್ಲಿ ತನಿಖೆಯ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಪಂಜಾಬ್ ಸರ್ಕಾರದ ತನಿಖೆಯು ಕೇಂದ್ರ ಗೃಹ ಸಚಿವಾಲಯದ ಆದೇಶಕ್ಕೆ ಸಮಾನಾಂತರವಾಗಿರುತ್ತದೆ, ಇದು ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ಪ್ರಧಾನಿ ಫಿರೋಜ್‌ಪುರಕ್ಕೆ ಭೇಟಿ ನೀಡುವ ವೇಳೆಯಲ್ಲಿ ಉಂಟಾದ ಭದ್ರತಾ ವ್ಯವಸ್ಥೆಯ ಲೋಪದ ಈ ತನಿಖೆ ನಡೆಯುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...