BIG NEWS: ‘ಬ್ಲೂ ಟಿಕ್’ ಕುರಿತಂತೆ ಮತ್ತೊಮ್ಮೆ ನಿರ್ಧಾರ ಬದಲಾಯಿಸಿದ ಎಲಾನ್ ಮಸ್ಕ್ 22-11-2022 8:28AM IST / No Comments / Posted In: Business, Latest News, Live News ಸಾಮಾಜಿಕ ಮಾಧ್ಯಮ ಟ್ವಿಟರ್ ತನ್ನ ತೆಕ್ಕೆಗೆ ಬರುತ್ತಿದ್ದಂತೆ ‘ಬ್ಲೂ ಟಿಕ್’ ಪಡೆಯಲು ಬಳಕೆದಾರರಿಗೆ ಶುಲ್ಕ ವಿಧಿಸಲಾಗುತ್ತದೆ ಎಂದು ಹೇಳಿದ್ದ ಸಿಇಒ ಎಲಾನ್ ಮಸ್ಕ್, ಇದಕ್ಕಾಗಿ ಪ್ರತಿ ತಿಂಗಳು 8 ಡಾಲರ್ ಶುಲ್ಕ ನಿಗದಿಪಡಿಸಲಾಗಿದೆ ಎಂದಿದ್ದರು. ಅಲ್ಲದೆ ನವೆಂಬರ್ 10ರಿಂದ ಐ ಫೋನ್ ಬಳಕೆದಾರರಿಗೆ ಈ ಶುಲ್ಕ ವಿಧಿಸಲು ಆರಂಭ ಮಾಡಿದ್ದು, ಚಂದಾದಾರರಾಗುವವರಿಗೆ 7.99 ಡಾಲರ್ ಎಂದು ಹೇಳಲಾಗಿತ್ತು. ಬಳಿಕ ಮರುದಿನವೇ ಇದನ್ನು ಸ್ಥಗಿತಗೊಳಿಸಲಾಗಿದ್ದು, ನವೆಂಬರ್ 29 ರಿಂದ ಆರಂಭಿಸುವುದಾಗಿ ಘೋಷಿಸಲಾಗಿತ್ತು. ಇದೀಗ ಎಲಾನ್ ಮಸ್ಕ್ ಮತ್ತೊಮ್ಮೆ ತಮ್ಮ ನಿರ್ಧಾರ ಬದಲಿಸಿದ್ದಾರೆ. ಬ್ಲೂ ಟಿಕ್ ನೀಡುವ ತೀರ್ಮಾನವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದು, ವೈಯಕ್ತಿಕ ಹಾಗೂ ಸಂಸ್ಥೆಗಳಿಗೆ ವಿವಿಧ ಬಣ್ಣಗಳ ಟಿಕ್ ನೀಡಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ. ಹೀಗಾಗಿ ಇದನ್ನು ಅಂತಿಮಗೊಳಿಸುವವರೆಗೂ ಬಳಕೆದಾರರಿಗೆ ಶುಲ್ಕ ವಿಧಿಸಲಾಗುವುದಿಲ್ಲ. ಇವರ ಮಧ್ಯೆ ಅಮೆರಿಕಾದ ಕ್ಯಾಪಿಟಲ್ ಹಿಲ್ ಹಿಂಸಾಚಾರದ ಬಳಿಕ ಜನವರಿ 6 ರಿಂದ ಸ್ಥಗಿತಗೊಳಿಸಲಾಗಿದ್ದ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಮತ್ತೆ ಸಕ್ರಿಯಗೊಳಿಸಲಾಗಿದೆ. ಇದಕ್ಕಾಗಿ ಎಲಾನ್ ಮಸ್ಕ್ ಸಮೀಕ್ಷೆಯನ್ನು ನಡೆಸಿದ್ದು ಶೇಕಡ ನಾಲ್ಕು ಮತಗಳ ಅಂತರದಲ್ಲಿ ಟ್ರಂಪ್ ಅವರ ಖಾತೆಯ ಸಕ್ರಿಯಗೊಳಿಸುವ ವಿಚಾರ ಗೆದ್ದಿತ್ತು. Holding off relaunch of Blue Verified until there is high confidence of stopping impersonation. Will probably use different color check for organizations than individuals. — Elon Musk (@elonmusk) November 22, 2022 The people have spoken. Trump will be reinstated. Vox Populi, Vox Dei. https://t.co/jmkhFuyfkv — Elon Musk (@elonmusk) November 20, 2022